ಸುಗಮ ಸಂಚಾರಕ್ಕೆ ರಸ್ತೆ ಉಬ್ಬು ತೆರವು

121022 Kushtagi Road Hamps Clear
ಕುಷ್ಟಗಿಯಲ್ಲಿ ಆರಂಭಿಸಿರುವ ಬಿಜೆಪಿ ಕಚೇರಿಗೆ ತೆರಳುವ ಗಜೇಂದ್ರಗಡ ರಸ್ತೆಯಲ್ಲಿದ್ದ ರಸ್ತೆ ಉಬ್ಬು ತೆರವುಗೊಳಿಸುತ್ತಿದ್ದ ದೃಶ್ಯ ಬುಧವಾರ ಕಂಡು ಬಂತು.
Published on

ಕುಷ್ಟಗಿ: ಪಟ್ಟಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುವ ಹಿನ್ನೆಲೆ ಸಂಚಾರ ಸುಗಮಕ್ಕೆ ಪಟ್ಟಣದ ಪ್ರಮುಖ ರಸ್ತೆಗಳ ಬ್ರೇಕರ್(ರಸ್ತೆ ಉಬ್ಬು) ತೆರವುಗೊಳಿಸಿದ ದೃಶ್ಯ ಬುಧವಾರ ಕಂಡುಬಂತು. ತಾವರಗೇರಾ ರಸ್ತೆಯ ಹೆಲಿಪ್ಯಾಡ್ ಸ್ಥಳದಿಂದ ರಾಷ್ಟೀಯ ಹೆದ್ದಾರಿ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ, ಮಾರುತಿ ವೃತ್ತದಿಂದ ಶಾಖಾಪುರ ರಸ್ತೆಯ ಬಿಜೆಪಿ ಕಚೇರಿ ವರೆಗಿನ ಎಲ್ಲ ರಸ್ತೆ ಉಬ್ಬುಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು.

ಪಟ್ಟಣದ ಪ್ರಮುಖ ರಸ್ತೆ ಸೇರಿದಂತೆ ತಾಲೂಕಿನಲ್ಲಿ ಹಾದು ಹೋಗಿರುವ ರಾಜ್ಯ ರಸ್ತೆಗಳಲ್ಲಿ ನೂರಾರು ಉಬ್ಬುಗಳಿವೆ. ಗಂಗಾವತಿ ರಸ್ತೆಯಲ್ಲಿ ಕಿಮೀ ಗೆ ಸರಾಸರಿ 2ರಂತೆ ಅನಗತ್ಯ ರಸ್ತೆ ಉಬ್ಬುಗಳಿದ್ದು ಸಂಚಾರಕ್ಕೆ ತೊಂದರೆ ಒಡ್ಡಿವೆ. ಸಾರಿಗೆ ಚಾಲಕರು ಸೇರಿ ವಾಹನ ಸವಾರರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಅನಗತ್ಯ ರಸ್ತೆ ಉಬ್ಬು ತೆರವಿಗೆ ಆಗ್ರಹಿಸುತ್ತಲೇ ಇದ್ದಾರೆ. ರಸ್ತೆ ಉಬ್ಬುಗಳ ಸಂಖ್ಯೆ ಹೆಚುತ್ತಿದೆಯೇ ವಿನಹ ತೆರವುಗೊಳಿಸಿಲ್ಲ. ಆದರೆ, ಸಿಎಂ ಆಗಮನ ಹಿನ್ನೆಲೆ ತೆರವುಗೊಳಿಸಿದ್ದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಸಿಎಂ ಬಂದು ಹೋಗುವ ರಸ್ತೆಗಳಲ್ಲಿ ಪೊಲೀಸರು ನಡೆಸಿದ ಸಂಚಾರ(ಕ್ಯಾನವಾ) ದಿಂದ ಪ್ರತಿ ಸಂಚಾರಕ್ಕೊಮ್ಮೆ ವಾಹನ ಸೇರಿ ಪಾದಚಾರಿಗಳ ಸಂಚಾರ ಸ್ಥಗಿತಗೊಂಡಿದ್ದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net