ಧೈರ್ಯದಿಂದ ಶಾಲೆಗೆ ಬನ್ನಿ ಎಂದ ಶಾಸಕ ಬಯ್ಯಪುರ

020121 Kushtagi Vidyagama Programme
ಕುಷ್ಟಗಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ನಮ್ಮ ನಡೆ ಶಾಲೆಯ ಕಡೆ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿದರು.
Published on

ಕುಷ್ಟಗಿ: ಶಾಲೆಗೆ ಧೈರ್ಯದಿಂದ ಬರುವಂತೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಕ್ಕಳಿಗೆ ತಿಳಿಸಿದರು. ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ನಮ್ಮ ನಡೆ ಶಾಲೆಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಡ್ 19 ಸಂಕಷ್ಟ ಸಮಯ ಮುಗಿಯುತ್ತ ಬಂದಿದೆ. ಅದರ ಹೊಸ ಅಲೆಯ ಬಗ್ಗೆ ಜಾಗರೂಕರಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಬಿಇಒ ಎಂ.ಚನ್ನಬಸಪ್ಪ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಶೈಲ ಸೋಮನಕಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ್, ಪ್ರಭಾರ ಮುಖ್ಯಶಿಕ್ಷಕ ಶಿವಯೋಗಪ್ಪ, ಬಿಆರ್‌ಪಿ ಜೀವನಸಾಬ್ ಬಿನ್ನಾಳ, ಶಿಕ್ಷಕರಾದ ಡಾ.ಶರಣಪ್ಪ ನಿಡಶೇಸಿ, ಸುಭಾಸ ನಿಡಸನೂರು, ರೇವಣಸಿದ್ದಪ್ಪ ಅಂಗಡಿ, ಬಿ.ಕೆ.ವಾರದ, ಅಕ್ಕಮಹಾದೇವಿ, ನಾಗರತ್ನ ಇತರರು ಇದ್ದರು.

ಡಿಡಿಪಿಐ ಭೇಟಿ: ತಾಲೂಕಿನ ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಿಡಿಪೈ ದೊಡ್ಡಬಸಪ್ಪ ನೀರಲಕೇರಿ ಭೇಟಿ ನೀಡಿ ವಿದ್ಯಾಗಮ ಕಾರ್ಯಕ್ರಮ ಪರಿಶೀಲಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶರಣಪ್ಪ ತುಮರಿಕೊಪ್ಪ, ಉಸ್ತಾದ್ ಇದ್ದರು.'

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net