ಕಡಲೆ ಖರೀದಿ ಕೇಂದ್ರ ಆರಂಭಿಸಿ: ಕುಷ್ಟಗಿ ತಾಲೂಕು ರೈತರ ಒತ್ತಾಯ

130223 Kushtagi Kadale Belegarara Manavi
ಕುಷ್ಟಗಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮುರಳೀಧರ್‌ಗೆ ಕಡಲೆ ಬೆಳೆಗಾರರು ಮನವಿ ಸಲ್ಲಿಸಿದರು.
Published on

ಕುಷ್ಟಗಿ: ಕಡಲೆಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿ ವಿವಿಧ ಗ್ರಾಮಗಳ ರೈತರು, ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ಮುರಳೀಧರ್‌ಗೆ ಸೋಮವಾರ ಸಲ್ಲಿಸಿದರು.

ಹಿಂಗಾರು ಹಂಗಾಮಿನಲ್ಲಿ ತಾಲೂಕಿನ ಬಹುತೇಕ ರೈತರು ಕಡಲೆ ಬೆಳೆದಿದ್ದಾರೆ. ಇಳುವರಿಯೂ ಉತ್ತಮವಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುವಂತಾಗಿದೆ. ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗುತ್ತದೆ. ಶೀಘ್ರವೇ ಕೇಂದ್ರ ತೆರೆದು ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು. ರೈತರಾದ ಚನ್ನಪ್ಪ ನಾಲಗಾರ್, ಅಬ್ದುಲ್ ರಜಾಕ್ ಸುಳ್ಳದ್, ಹನುಮಂತ ಸಾಸ್ವಿಹಾಳ, ರಾಮಣ್ಣ ಕಲಕಬಂಡಿ, ಈರಪ್ಪ ತೋಟದ್, ಶಿವಪುತ್ರಪ್ಪ ಕಂಚಿ, ರಾಮಣ್ಣ ಹನುಮಸಾಗರ, ಯಮನೂರಪ್ಪ ಮಡಿವಾಳರ್, ಮುತ್ತುರಾಜ ಎಲಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net