

ಕುಷ್ಟಗಿ: ನಾಗರಿಕತೆ ಹಾಗೂ ಜ್ಞಾನ ವೃದ್ಧಿಯಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತ ಬಂದಿವೆ ಎಂದು ಪಟ್ಟಣದ ಲೈಬರ‌್ರಿ ಗ್ರಂಥಪಾಲಕಿ ಕೆ.ಎಸ್.ಬಿರಾದಾರ್ ಹೇಳಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ಗ್ರಂಥಾಲಯ ಪಿತಾಮಹಾ ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗುರುವಾರ ಮಾತನಾಡಿದರು. ದೇಶ ಸುತ್ತು ಇಲ್ಲ ಕೋಶ ಓದು ಎಂಬ ಮಾತಿನಂತೆ ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ದಿನದಲ್ಲಿ ಸ್ವಲ್ಪ ಹೊತ್ತು ಪುಸ್ತಕ ಓದಲು ಮೀಸಲಿಡಬೇಕು. ಮಕ್ಕಳಿಗೂ ಪುಸ್ತಕ ಓದುವ ಅಭಿರುಚಿ ಹೆಚ್ಚಿಸಬೇಕು. ಇಂಡಿಯನ್ ಲೈಬ್ರರಿ ಅಸೋಸಿಯೇಷನ್ ನಿರ್ಧಾರದಂತೆ 1968ರಿಂದ ಪ್ರತಿ ವರ್ಷ ನ.14ರಿಂದ 20ರವರೆಗೆ ಗ್ರಂಥಾಲಯ ಸಪ್ತಾಹ ಆಚರಿಸುತ್ತ ಬರಲಾಗಿದೆ. ಜನರನ್ನು ಗ್ರಂಥಾಲಯದತ್ತ ಆಕರ್ಷಿಸಲು ಹಾಗೂ ಓದುವ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಸಪ್ತಾಹ ಪ್ರಾಮುಖ್ಯತೆ ಪಡೆದಿದೆ ಎಂದರು.
ಸಾಹಿತಿ ಶರಣಪ್ಪ ವಡಿಗೇರಿ, ಪ್ರಮುಖರಾದ ಸಿದ್ದಪ್ಪ, ರಿಯಾಜ್, ಸುಖಮುನಿ, ದೇವೇಂದ್ರಪ್ಪ, ಭೂಮಿಕಾ, ರತ್ನಾ, ಪಾರ್ವತಿ, ನಾಗರಾಜ ಇತರರಿದ್ದರು. ತಾಲೂಕಿನ ಹಿರೇಮನ್ನಾಪುರದ ಗ್ರಂಥಾಲಯದಲ್ಲಿ ಗ್ರಾಪಂ ಪಿಡಿಒ ಶಿವಪುತ್ರಪ್ಪ ಬರದೆಲಿ ಗ್ರಂಥಾಲಯ ಪಿತಾಮಹಾ ರಂಗನಾಥನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಪಂ ಉಪಾಧ್ಯಕ್ಷ ದೇವಪ್ಪ ಸುಬೇದಾರ್, ಸದಸ್ಯರಾದ ಪರಸಪ್ಪ ಚಳ್ಳೂರು, ಪ್ಯಾಟೆಪ್ಪ ಸೂಡಿ, ಮಾಜಿ ಅಧ್ಯಕ್ಷ ಹನುಮಂತ ಅಳ್ಳಳ್ಳಿ, ಗವಿಸಿದ್ಧೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಜಿ.ಕಡೇಮನಿ, ಗ್ರಂಥಪಾಲಕ ಗೋಪಾಲ್ ಕಲಾಲ್ ಇತರರಿದ್ದರು.