

ಕುಷ್ಟಗಿ: ಕಾಂಗ್ರೆಸ ಜನವಿರೋಧಿ ಕೆಲಸದಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಅನೈತಿಕತೆಯ ಪರಮಾವಧಿ ತಲುಪಿದೆ. ಅಭಿವೃದ್ಧಿ ವಿಚಾರಗಳ ಕುರಿತು ಧ್ವನಿ ಎತ್ತದೆ ಅನಗತ್ಯ ವಿಚಾರಗಳನ್ನೇ ಪ್ರಮುಖವಾಗಿಸಿಕೊಂಡು ಪ್ರತಿಭಟನೆ, ಧರಣಿಯಲ್ಲಿ ತೊಡಗಿದೆ ಎಂದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಾನತೆ ಇರಲಿ ಎಂಬ ಕಾರಣಕ್ಕೆ ಸಮವಸ್ತ್ರ ನೀತಿ ತರಲಾಗಿದೆ. ಆದರೆ, ಕಾಂಗ್ರೆಸ್‌ನವರು ಮಕ್ಕಳಲ್ಲಿ ಧರ್ಮದ ವಿಷ ಬೀಜ ಬಿತ್ತುವ ಮೂಲಕ ಕೋಮು ಗಲಭೆಗಳಿಗೆ ಕಾರಣರಾಗುತ್ತಿದ್ದಾರೆ ಎಂದು ದೂರಿದರು. ಪಕ್ಷದ ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು, ಜಿಪಂ ಮಾಜಿ ಸದಸ್ಯ ಕೆ.ಮಹೇಶ ಮಾತನಾಡಿದರು. ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಸದಸ್ಯ ಜೆ.ಜಿ.ಆಚಾರ್, ಪ್ರಮುಖರಾದ ಚಂದ್ರಕಾಂತ ವಡಗೇರಿ, ಶಂಕರಗೌಡ ಪಾಟೀಲ್, ಕಂದಕೂರಪ್ಪ ವಾಲ್ಮೀಕಿ, ವಿಜಯಕುಮಾರ ಹಿರೇಮಠ, ಅಮಿನುದ್ದೀನ್, ದೊಡ್ಡಬಸವ ಸುಂಕದ್ ಮುಲ್ಲಾ ಇತರರಿದ್ದರು.