ಬೈಕ್ ಸವಾರನ ಸಾವಿಗೆ ಕಾರಣನಾದ ಕಾರು ಚಾಲಕಗೆ ಜೈಲು ಶಿಕ್ಷೆ: ಕುಷ್ಟಗಿ ಜೆಎಂಎಫ್‌ಸಿ ಆದೇಶ

court
Published on

ಕುಷ್ಟಗಿ: ಅತಿವೇಗ ಹಾಗೂ ನಿರ್ಲಕ್ಷೃದಿಂದ ಕಾರು ಚಾಲನೆ ಮಾಡಿ ಬೈಕ್ ಸವಾರ ಶಂಕ್ರಪ್ಪ ಪರಸಪ್ಪ ರಾಗಿ ಎಂಬುವವರ ಸಾವಿಗೆ ಕಾರಣವಾಗಿದ್ದ ವಸಂತಕುಮಾರ್ ರಾಜಶೇಖರ್ ನಾಯಕ್ ಎನ್ನುವವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿ ಪಟ್ಟಣದ ಪ್ರಧಾನ ಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. 2015ರ ಮೇ 15ರಂದು ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಪ್ರಧಾನ ಸಿವಿಲ್ ನ್ಯಾಯಾಧೀಶ ಶಂಭುಲಿಂಗಯ್ಯ ಮೂಡಿಮಠ, ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಸಿಪಿಐ ಆಗಿದ್ದ ಆರ್.ಎಸ್.ಉಜ್ಜನಕೊಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದರು. ಸರ್ಕಾರಿ ಸಹಾಯಕ ಅಭಿಯೋಜಕ ಎಲ್.ರಾಯನಗೌಡ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net