ಪ್ರಾರ್ಥನೆಗೂ ಮುನ್ನ ಥರ್ಮಲ್‌ಸ್ಕ್ರೀನಿಂಗ್

01082020 Kustagi Bakrid Festival
Published on

ಕುಷ್ಟಗಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಬಕ್ರೀದ್ ಹಬ್ಬ ಆಚರಿಸಲಾಯಿತು. ಮುಸ್ಲಿಮರು ಮಸೀದಿಗಳಿಗೆ ತೆರಳಿ ಪರಸ್ಪರ ಅಂತರ ಕಾಯ್ದುಕೊಂಡು ಪ್ರಾರ್ಥನೆಗೈದು ಅಲ್ಲಾಹುನ ಕೃಪೆಗೆ ಪಾತ್ರರಾದರು.

ಕರೊನಾ ಹಿನ್ನೆಲೆ ಸರ್ಕಾರದ ನಿರ್ದೇಶನದಂತೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಬೆಳಗ್ಗೆ 7 ರಿಂದ 9 ರವರೆಗೆ ಅರ್ಧ ತಾಸಿಗೊಂದು ಬ್ಯಾಚ್‌ನಂತೆ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳಲಾಯಿತು.

ಪ್ರಾರ್ಥನೆಗೂ ಮುನ್ನ ಪ್ರತಿಯೊಬ್ಬರ ಸ್ಕ್ರೀನಿಂಗ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಾಕಿ ಕಳುಹಿಸಲಾಯಿತು. ಪಂಚ ಕಮಿಟಿ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಡಾ.ಶೇಖ್ ಜವ್ವಾದ್ ಹುಸೇನ್, ಸೈಯದ್ ಮರ್ತುಜಾ ಅತ್ತಾರ, ತಾಜುದ್ದೀನ್‌ಸಾಬ ದಳಪತಿ, ಫೈರೋಜ್ ಅಹ್ಮದ್ ಅನಾಸೂರ್, ಅಬ್ದುಲ್ ನಯೀಂ, ಅಹ್ಮದ್ ಹುಸೇನ್ ಸೇರಿ ಸಮುದಾಯದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net