

ಹುಬ್ಬಳ್ಳಿ: ಭಾರತದ ಜನಪ್ರಿಯ ಫ್ಯಾಶನ್ ಮತ್ತು ಬೆಳ್ಳಿ ಆಭರಣಗಳ ಬ್ರಾಂಡ್ ಕುಶಲ್ಸ್ ವತಿಯಿಂದ ವರ ಮಹಾಲಕ್ಷ್ಮಿವ್ರತಂ ಅಭಿಯಾನ ಆರಂಭಿಸಲಾಗಿದೆ. "ನಿಮ್ಮಲ್ಲೇ ದೇವತೆಯನ್ನು ಆಚರಿಸಿ' (ಸೆಲೆಬ್ರೇಟ್ ದ ಗಾಡ್ಡೆಸ್ ಇನ್ ಯು) ಎಂಬುದು ಅಭಿಯಾನದ ವಿಷಯವಾಗಿದೆ. ಪ್ರತಿ ಮಹಿಳೆಯಲ್ಲಿ ಅಡಗಿರುವ ಶಕ್ತಿ, ಸೌಂದರ್ಯ ಮತ್ತು ಆತ್ಮಬಲ, ಸಮೃದ್ಧಿ ಹಾಗೂ ಅನುಗ್ರಹವನ್ನು ಗುರುತಿಸಿ ಗೌರವಿಸುವುದು ಇದರ ಗುರಿಯಾಗಿದೆ.
ಅಭಿಯಾನದ ಕೇಂದ್ರ ಬಿಂದು ಡಿಜಿಟಲ್ ಫಿಲ್ಮ ಆಗಿದ್ದು, ಇದು ಮಹಿಳೆಯರಲ್ಲಿ ಸಾಕಾರಗೊಂಡಿರುವ ದೈವಿಕ ಗುಣಗಳನ್ನು ಆಚರಿಸುತ್ತದೆ. ಈ ಚಿತ್ರವು ಆಧುನಿಕ ಮಹಿಳೆಯ ಸ್ಥಿತಿಸ್ಥಾಪಕತ್ವ, ಸೊಬಗು ಮತ್ತು ಸಹಜ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಈ ವರಮಹಾಲಕ್ಷ್ಮಿ ವೃತಂ ಸಂಗ್ರಹದಲ್ಲಿ ಅನೇಕ ಆಕರ್ಷಕ ಆಭರಣಗಳಿವೆ.
ಅದ್ಭುತವಾದ ಟೆಂಪಲ್ ಜುವೆಲರಿಗಳು ಮಹಿಳೆಯರನ್ನು ಕೈಬೀಸಿ ಕರೆಯುತ್ತಿವೆ. ಇವುಗಳನ್ನು ಆ್ಯಂಟಿಕ್ ಫಿನಿಶ್ ರೀತಿಯಲ್ಲಿ ಸಿದ್ಧಪಡಿಸಲಾಗಿದೆ ಮತ್ತು 92.5 ಬೆಳ್ಳಿಯಿಂದ ತಯಾರಿಸಲಾಗಿದೆ.
ಇದರಲ್ಲಿನ ದೇವಿ ಲಕ್ಷ್ಮಿಯ ಕುಸುರಿಯು ಎಲ್ಲರಲ್ಲೂ ಭಕ್ತಿ ತರುವಂತೆ ಮಾಡುತ್ತದೆ. ಇದೇ ರೀತಿ, ತಾವರೆ, ಹಂಸ ಮತ್ತು ಕುಂಕುಮವು ದೈವಿಕ ಅನುಗ್ರಹವನ್ನು ನೀಡುತ್ತದೆ. ಈ ಸಂಗ್ರಹದಲ್ಲಿ 200ಕ್ಕೂ ಹೆಚ್ಚು ಅದ್ಭುತವಾದ ವಿನ್ಯಾಸಗಳು ಇವೆ.