

ಕೊಡಗು: ಬಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕುಶಾಲನಗರ ಸಮೀಪದ ಮೂಕಾಂಬಿಕ ಪ್ರೌಢಶಾಲಾ ವಿದಾರ್ಥಿ ಮಂಜುನಾಥ್ (15) ಮೃತ ಬಾಲಕ. ಬಾಲಕನ ಸಾವಿನ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದು, ಬಾಲಕನ ಅಜ್ಜ-ಅಜ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಕನನ್ನು ಆತನ ಅಜ್ಜ, ಅಜ್ಜಿ ಹೊಡೆದು ಹತ್ಯೆಗೈದಿರುವ ಆರೋಪ ಮಾಡಲಾಗಿದೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.