ದಸರಾ ಫುಟ್‌ಬಾಲ್‌ನಲ್ಲಿ ಕುಶಾಲನಗರ ತಂಡ ಚಾಂಪಿಯನ್

Kushalanagar team is champion in Dussehra Football
Published on

ಕುಶಾಲನಗರ:

ದಸರಾ ಅಂಗವಾಗಿ ಮೈಸೂರಿನಲ್ಲಿ ನಡೆದ ಪುಟ್ಬಾಲ್ ಕ್ರೀಡಾ ಪಂದ್ಯಾವಳಿಯಲ್ಲಿ ಕುಶಾಲನಗರದ ಮೊಹಮ್ಮದ್ ಇಬ್ರಾಹಿಂ ( ಟಿಲ್ಲು ) ನೇತೃತ್ವದ ತಂಡ ಪುಟ್ಬಾಲ್ ನಲ್ಲಿ ಅಮೋಘವಾದ ಸಾಧನೆ ಮಾಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿಜೇತ ಟಿಲ್ಲು ನೇತೃತ್ವದ ತಂಡಕ್ಕೆ ಮುಖ್ಯ ಮಂತ್ರಿ ಟ್ರೋಫಿ ಲಭಿಸಿದೆ.

ಮೈಸೂರು ವಿಭಾಗವನ್ನು ಪ್ರತಿನಿಧಿಸುವ ದಸರಾ ಪಂದ್ಯಾವಳಿಯಲ್ಲಿ ಕೊಡಗಿನ ಪುಟ್ಬಾಲ್ ಆಟಗಾರರಾದ ಮೊಹಮ್ಮದ್ ಇಬ್ರಾಹಿಂ (ಟಿಲ್ಲು) ನಾಯಕ.
ಟಿಲ್ಲು ಅವರ ಪುತ್ರ ಮೊಹಮ್ಮದ್ ಇರ್ಷಾದ್, ಸುಂಟಿಕೊಪ್ಪದ ದಿವಾಕರ್, ಉನೈಸ್, ಕುಟ್ಟಿಇರ್ಷಾದ್,ಅಸಾಮುದ್ದೀನ್, ಅಮತ್ತಿಯ ವಿಜೇಶ್, ಕೊಡಗರಹಳ್ಳಿಯ ವಿಜಯ್, ಪಾಲಿಬೆಟ್ಟದ ಕಿರಣ್, ದೀಕ್ಷಿತ್,ಮಣಿಕಂಠ ಮೊದಲಾದವರು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ದಸರಾದ ಅಂಗವಾಗಿ ನಡೆಯುವ ಪುಟ್ಬಾಲ್ ಪಂದ್ಯಾವಳಿಯಲ್ಲಿ ಕಳೆದ 2022 ರಲ್ಲಿ ಕೊಡಗಿನ ತಂಡ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದೆವು. ಇದೀಗ ಎರಡನೇ ಬಾರಿ ಚಾಂಪಿಯನ್ ಆದೆವು ಎಂದು ತಂಡದ ನಾಯಕ ಟಿಲ್ಲು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net