

ಕುಶಾಲನಗರ:
ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಎರಡನೇ ಅವಧಿಯ ಅಧ್ಯಕ್ಷರಾಗಿ ಜಯಲಕ್ಷಿö್ಮÃ ಚಂದ್ರು ಮತ್ತು ಉಪಾಧ್ಯಕ್ಷೆಯಾಗಿ ಪುಟ್ಟಲಕ್ಷಿö್ಮÃ ಸೋಮವಾರ ಅಧಿಕಾರ ಸ್ವೀಕರಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೂಗುಚ್ಛಗಳನ್ನು ನೀಡುವ ಮೂಲಕ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಗೆ ಶುಭ ಹಾರೈಸಿದರು.
ಈ ಸಂದರ್ಭ ನೂತನ ಚುನಾಯಿತ ಆಡಳಿತ ಮಂಡಳಿ ಉದ್ದೇಶಿಸಿ ಮಾತನಾಡಿದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಅನೇಕ ಸವಾಲುಗಳ ನಡುವೆ ಪಟ್ಟಣದ ಆಡಳಿತದ ಗದ್ದುಗೆ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸಾರ್ವಜನಿಕರನ್ನು ಕಚೇರಿಯಲ್ಲಿ ಸತಾಯಿಸದೇ ಸಕಾಲದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಹೊಣೆಗಾರಿಕೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಮೇಲಿದೆ. ಪಂಚಾಯಿತಿಗೆ ಹೊಸದಾಗಿ ಸೇರಿರುವ ಮುಳ್ಳುಸೋಗೆ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಚುನಾಯಿತ ಆಡಳಿತ ಮಂಡಳಿ ಹೊಸ ಯೋಜನೆಗಳನ್ನು ರೂಪಿಸಬೇಕು. ಪಂಚಾಯಿತಿ ಕಚೇರಿಯೊಳಗೆ ಮುಖ್ಯಾಧಿಕಾರಿಗಳು ಮಧ್ಯವರ್ತಿಗಳಿಗೆ ಆಸ್ಪದ ಮಾಡಿಕೊಡಬಾರದು. ಚುನಾಯಿತ ಸದಸ್ಯರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್, ಸದಸ್ಯರಾದ ಖಲೀಮುಲ್ಲಾ, ದಿನೇಶ್, ಸುರೇಶ್, ಪ್ರಕಾಶ್, ನವೀನ್, ಹರೀಶ್, ಶಿವಕುಮಾರ್, ಜಗದೀಶ್, ಪದ್ಮಾವತಿ, ಪ್ರಮುಖರಾದ ಕೆ.ಎನ್. ಅಶೋಕ್, ರಂಜನ್, ರೋಷನ್, ಅರುಣರಾವ್, ಕುಂಜ್ಞಿ ಕುಟ್ಟಿ ಇತರರಿದ್ದರು.