

ಕುಶಾಲನಗರ: ಕುಶಾಲನಗರದ ಹೆಗ್ಗಡೆ ಸಮಾಜದ ವಾರ್ಷಿಕ ಮಹಾಸಭೆ ಹಾರಂಗಿಯಲ್ಲಿನ ಸಮಾಜದ ನಿವೇಶನದಲ್ಲಿ ಅಧ್ಯಕ್ಷ ಚಂಗಚಂಡ ನಂಜಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಮುಂದಿನ ಮಹಾಸಭೆಯೊಳಗೆ ಅರ್ಧ ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಾಗ ಖರೀದಿಸಿ ಸರ್ಕಾರ ಮತ್ತು ದಾನಿಗಳ ನೆರವಿನಿಂದ ಸುಸಜ್ಜಿತ ಕಟ್ಟಡ ನಿರ್ಮಿಸಲು ನಿರ್ಧರಿಸಲಾಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಡಿಞರಂಡ ಪ್ರಭು ಕುಮಾರ್ ಮಾತನಾಡಿ, 13 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಜನಾಂಗದವರಿಗೆ ಪ್ರರ್ಗ 2ಎ ಅಡಿ ಮೀಸಲಾತಿ ವ್ಯವಸ್ಥೆ ಇದೆ. ಇದನ್ನು ರಾಜಕೀಯ ವ್ಯವಸ್ಥೆಗೂ ವಿಸ್ತರಿಸಬೇಕು. ಈ ಮೀಸಲಾತಿಯಡಿ ಸ್ಪರ್ಧೆಗೆ ಅವಕಾಶ ನೀಡಿದಲ್ಲಿ ನಮ್ಮ ಜನಾಂಗದವರೂ ರಾಜಕೀಯ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಬಹುದೆಂದು ಹೇಳಿದರು.
ಕಾನೂನು ಪದವಿಯಲ್ಲಿ ರ‌್ಯಾಂಕ್ ಪಡೆದ ಮಂಡೆಯಂಡ ರನ್ನಿಕಾ, ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಕೊಂಗೆಪಂಡ ನಂಜಪ್ಪ, ಬೆಂಗಳೂರು ಬೆಮೆಲ್ ನಿವೃತ್ತ ಉದ್ಯೋಗಿ ಮೇಲಾಟಂಡ ಚಂಗಪ್ಪ, ಅಂಗನವಾಡಿ ಶಿಕ್ಷಕಿ ಪುದಿಯತಂಡ ಗಂಗಮ್ಮ ಅವರನ್ನು ಸನ್ಮಾನಿಸಲಾಯಿತು.
ಹಾಲುಗುಂದ ಗ್ರಾಪಂ ಅಧ್ಯಕ್ಷ ಪಂದಿಕಂಡ ಕುಶ, ಬೆಟ್ಟಗೇರಿ ಗ್ರಾಪಂ ಅಧ್ಯಕ್ಷ ಚಳಿಯಂಡ ಕಮಲ, ಪ್ರಮುಖರಾದ ಕೊಪ್ಪಡ ಪಟ್ಟು ಪಳಂಗಪ್ಪ, ಪಾನಿಕುಟ್ಟೀರ ರಾಧಾ ಕುಟ್ಟಪ್ಪ, ಕುಶಾಲನಗರ ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಚಂಗಚಂಡ ಸುಬ್ರಮಣಿ, ಕಾರ್ಯದರ್ಶಿ ಪಂದಿಕಂಡ ವಿಠಲ, ಸಹ ಕಾರ್ಯದರ್ಶಿ ಚಳಿಯಂಡ ಯಶ್ವಂತ್, ಖಜಾಂಚಿ ಪಂದಿಕಂಡ ಗಣೇಶ್, ಪುದಿಯತಂಡ ಬೆಳ್ಳಿಯಪ್ಪ, ಪುದಿಯತಂಡ ಗಾಂಧಿ, ಕಾಟಿಕುಟ್ಟೀರ ಮೋಣಪ್ಪ ಮೇಲತಂಡ ಮಂಜುಳ, ಪೊಕ್ಕಳಿಚಂಡ ಲಲಿತಾ, ಸಲಹೆಗಾರ ಕೊಂಗೆಪಂಡ ನಂಜಪ್ಪ, ಚಳಿಯಂಡ ಅಚ್ಚಯ್ಯ ಹಾಜರಿದ್ದರು.