ಕುಶಾಲನಗರ ಚೇಂಬರ್ ಅಧ್ಯಕ್ಷರಾಗಿ ಕೆ.ಎಸ್. ನಾಗೇಶ್ ಆಯ್ಕೆ

Kushalanagar Chamber President K.S. Nagesh's choice
Published on

ಕುಶಾಲನಗರ:

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಕೆ.ಎಸ್. ನಾಗೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ರವೀಂದ್ರ ವಿ. ರೈ ವೈಯಕ್ತಿಕ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಊ ಹಿನ್ನೆಲೆಯಲ್ಲಿ ಸೋಮವಾರ ಉಪಾಧ್ಯಕ್ಷ ಎಂ.ಡಿ. ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕಾರ್ಯದರ್ಶಿಯಾಗಿದ್ದ ಕೆ.ಎಸ್.ನಾಗೇಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ರವೀಂದ್ರ ರೈ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸಿದ್ದರು. ಅ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನೂತನ ಅಧ್ಯಕ್ಷ ನಾಗೇಶ್ ಅವರು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಅರ್. ನಾಗೇಂದ್ರ ಪ್ರಸಾದ್ ಸಲಹೆ ನೀಡಿದರು. ಜಿಲ್ಲಾ ಚೇಂಬರ್ ಮಾತ್ರವಲ್ಲದೆ ರಾಜ್ಯದ ಎಫ್‌ಕೆಸಿಸಿ ಕೂಡ ಮಾರ್ಗದರ್ಶನ ಕೊಡಲು ಸಿದ್ದವಿರುತ್ತದೆ. ವರ್ತಕರ ಹಿತದೃಷ್ಟಿಯಿಂದ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗುವಂತೆ ಶುಭ ಹಾರೈಸಿದರು.

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಘಟನಾ ಕಾರ್ಯದರ್ಶಿ ಟಿ.ಆರ್.ಶರವಣ ಕುಮಾರ್ ಮಾತನಾಡಿ, ಸಂಸ್ಥೆಯ ನಿವೇಶನದಲ್ಲಿ ಆದಷ್ಟು ಬೇಗ ಸ್ವಂತ ಕಟ್ಟಡ ನಿರ್ಮಿಸಲು ಅಧ್ಯಕ್ಷರು ಮುನ್ನುಗ್ಗಬೇಕು. ಅದಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿ ಮಾಡಲು ಪದಾಧಿಕಾರಿಗಳು ಮತ್ತು ಸದಸ್ಯರು ಸಹಾಯ ಹಸ್ತ ಚಾಚಬೇಕು ಎಂದರು.

ನೂತನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಇದು ಅನಿರೀಕ್ಷಿತವಾದ ಜವಾಬ್ದಾರಿ. ವಹಿಸಿಕೊಂಡ ನಂತರ ಅಧಿಕಾರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಖಜಾಂಚಿ ಎನ್.ವಿ. ಬಾಬು, ನಿರ್ದೇಶಕರಾದ ಎಂ.ಕೆ. ದಿನೇಶ್, ಪಿ.ಕೆ.ಜಗದೀಶ್, ಕೆ.ಎನ್.ದೇವರಾಜ್, ಚಂದ್ರು, ಕೆ.ಎಸ್.ರಾಜಶೇಖರ್, ಪಿ.ಎಂ.ಮೋಹನ್, ರೂಪ ವಿನೋದ್, ಅಂಜನ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net