

ಕುಶಾಲನಗರ:
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊಡಗು ಜಿಲ್ಲೆಯಿಂದ ಪ್ರತಿದಿನ 5 ರಿಂದ 7 ಕೋಟಿ ರೂ.ಗಳ ತೆರಿಗೆ ಹಣ ಪಾವತಿಯಾಗುತ್ತಿದ್ದರೂ ಕೂಡ ಜಿಲ್ಲೆಗೆ ಸರ್ಕಾರದಿಂದ ಯಾವುದೇ ಪ್ರಯೋಜನಗಳು ಆಗುತ್ತಿಲ್ಲ ಎಂದು ವರ್ತಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅಸಮಧಾನ ವ್ಯಕ್ತಪಡಿಸಿದರು. ಕುಶಾಲನಗರದ ಕನ್ನಿಕಾ ಹೋಟೆಲ್ ಸಭಾಂಗಣದಲ್ಲಿ ಬುಧವಾರ ನಡೆದ ಛೇಂಬರ್‌ನ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಸ್.ನಾಗೇಶ್ ಅವರಿಗೆ ಸಮಾನ ಮನಸ್ಕರು ನೀಡಿದ ಅಭಿನಂದನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ವ್ಯಾಪಾರ ವಹಿವಾಟುಗಳು ನಡೆಯುವ ಕುಶಾಲನಗರದ ಪ್ರಮುಖ ವಾಣಿಜ್ಯ ವಹಿವಾಟಿನ ರಥಬೀದಿಯಲ್ಲಿ ವಾಹನ ನಿಲುಗಡೆ ಸಮಸ್ಯೆಯಿಂದಾಗಿ ವರ್ತಕರಿಗೆ ಬಹಳಷ್ಟು ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಸ್ಥಳೀಯ ಪುರಸಭೆಯ ಸಹಕಾರದೊಂದಿಗೆ ಸ್ಥಾನೀಯ ಸಮಿತಿ ವಾಹನ ನಿಲುಗಡೆಗೆ ಪೂರಕವಾದ ವಿವಿಧೋದ್ದೇಶ ಕಟ್ಟಡ ನಿರ್ಮಿಸಿ ವಾಹನ ನಿಲುಗಡೆಗೆ ಅವಕಾಶಗಳಾಗಬೇಕಿದೆ. ಕುಶಾಲನಗರ ಪಟ್ಟಣದಲ್ಲಿ ಸ್ವಂತದ್ದಾದ ವರ್ತಕರ ಸಂಘದ ಸ್ವಂತ ಕಟ್ಟಡ ನಿರ್ಮಾಣದ ಯೋಜನೆ ರೂಪುಗೊಳ್ಳಬೇಕಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕುಶಾಲನಗರ ಚೇಂಬರ್ಸ್ ಸ್ಥಾನ ಅಲಂಕಾರಿಕ ಹುದ್ದೆಯಲ್ಲ. ಅದೊಂದು ಬಹಳಷ್ಟು ಜವಾಬ್ದಾರಿಯ ಸಮಿತಿಯಾಗಿದ್ದು ಬಹಳಷ್ಟು ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಜಿಲ್ಲೆಯಲ್ಲಿಯೇ ಮುಂಚೂಣಿಯ ನಗರವಾಗಿರುವ ಕುಶಾಲನಗರದ ಸರ್ವಾಂಗೀಣ ಪ್ರಗತಿಗೆ ಮುಂದಾಗಬೇಕೆAದರು.
ಈ ಸಂದರ್ಭ ಕೊಡಗು ಜಿಲ್ಲಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಆವರ್ತಿ ಮಹದೇವಪ್ಪ, ಜಿಲ್ಲಾ ಕಾರ್ಯದರ್ಶಿ ಲವಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಪುರಸಭೆ ಮಾಜಿ ಸದಸ್ಯರೂ ಆದ ಕಲಾವಿದ ಎಂ.ನAಜುAಡಸ್ವಾಮಿ, ಶಾಂತಪ್ಪ, ವಿಜಿ, ರಾಜು, ಹರೀಶ್, ಈಶಕುಮಾರ್, ಮಾಧು, ಪ್ರಶಾಂತ್, ವಸಂತ್, ಶಿವು ಇದ್ದರು.
ಗಾಯಕ ಸತೀಶ್ ಹಾಗೂ ನಂಜುAಡಸ್ವಾಮಿ ಅವರಿಂದ ಭಾವಗೀತೆ ಗಾಯನ ನಡೆಯಿತು.