ಕೃಷಿ ಕಾಯ್ದೆಗಳ ಹಿಂಪಡೆಯಲು ಆಗ್ರಹ: ಬಳ್ಳಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದ ರೈತರು

Kurugodu Farmers Protest
ಕುರುಗೋಡು ತಾಲೂಕಿನ ಕೋಳೂರು ಕ್ರಾಸ್ ಬಳಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದವು.
Published on

ಕುರುಗೋಡು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ, ಕಾರ್ಮಿಕ, ಖಾಸಗೀಕರಣ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಶನಿವಾರ ರಾಷ್ಟ್ರೀಯ ಹೆದ್ದಾರಿ 150ಎ ಕೋಳೂರು ಕ್ರಾಸ್ ಬಳಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದವು.

ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಸ್.ಶಿವಶಂಕರ್ ಮಾತನಾಡಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಯ್ದೆಗಳನ್ನು ಚರ್ಚಿಸದೆ ಏಕಾಏಕಿ ಜಾರಿಗೆ ತಂದಿರುವುದು ಸರ್ವಾಧಿಕಾರ ಧೋರಣೆಯಾಗಿದೆ. ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಅಲ್ಲಿಯವರೆಗೂ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದರು.

ರೈತ ಸಂಘದ ಕಾರ್ಯದರ್ಶಿ ಮಾದವರೆಡ್ಡಿ ಮಾತನಾಡಿ, ದಿಲ್ಲಿ ಹೋರಾಟಕ್ಕೆ ಕರ್ನಾಟಕದಲ್ಲೂ ಬೆಂಬಲ ನೀಡಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ. ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಚ್ಚರಿಸಿದರು.

ರೈತ ಕಾರ್ಮಿಕ ಸಂಘದ ಸಿ.ಗೋವಿಂದಪ್ಪ, ಹಮಾಲಿ ಸಂಘದ ಅಧ್ಯಕ್ಷ ಸೋಮಪ್ಪ, ತುಂಗಭದ್ರಾ ರೈತ ಸಂಘದ ಮುಖಂಡರಾದ ಶಾಪುರ ದೊಡ್ಡರಂಗಪ್ಪ, ಗೋವಿಂದಪ್ಪ, ಹುಲುಗಪ್ಪ, ಮಾರುತಿ, ಪಂಪಾಪತಿ, ಮಂಜುನಾಥ, ಎಐಡಿಎಸ್‌ಒ ಸಂಘಟನೆಯ ಗುರಳ್ಳಿ ರಾಜ, ಜಗದೀಶ್ ನೇಮಕಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net