ರಂಗಭೂಮಿ ಕಲಾವಿದರ ಪ್ರೋತ್ಸಾಹಿಸಿ

Kurgodu Cultural
ಬಾದನಹಟ್ಟಿ ಉಡಸಲಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ರಂಗೋತ್ಸವದಲ್ಲಿ ಮಕ್ಕಳು ನೃತ್ಯ ಮಾಡಿದರು.
Published on

ಕುರುಗೋಡು: ಗ್ರಾಮದ ಶ್ರೀ ಉಡಸಲಮ್ಮ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವದ್ದಟ್ಟಿ ರಂಗ ಬಸವೇಶ್ವರ ಕಲಾ ಟ್ರಸ್ಟ್‌ನಿಂದ ಗ್ರಾಮೀಣ ರಂಗೋತ್ಸವ ಕಾರ್ಯಕ್ರಮ ನಡೆಯಿತು.

ಪ್ರಮುಖ ಮುದ್ದಟನೂರು ತಿಪ್ಪೇಸ್ವಾಮಿ ಮಾತನಾಡಿ, ದೇಶದ ಸಂಸ್ಕೃತಿ ಹಾಗೂ ಪರಂಪರೆ ಉಳಿವಿಗಾಗಿ ಬಯಲು ನಾಟಕ, ಸುಗಮ ಸಂಗೀತ, ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು.

ಗ್ರಾಮೀಣ ಭಾಗದ ಜನ ಬಯಲು ನಾಟಕ, ರಂಗಭೂಮಿ ಕಲೆಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಮುಂದಾಗಬೇಕು ಎಂದರು.

ಗ್ರಾಪಂ ಅಧ್ಯಕ್ಷ ಕರಿಬೇಡರ ಕರೆಣ್ಣ, ಪ್ರಮುಖರಾದ ಹುಲಗಯ್ಯ ನಾಯಕರ್, ಪಿ.ಕರೆಣ್ಣ, ಸಿದ್ದಮ್ಮನಹಳ್ಳಿ ಕರಿಬಸಪ್ಪ, ಹುಲುಗಪ್ಪ, ಎಂ.ಬುಡ್ಡಪ್ಪ, ಕರಿಬಸವನಗೌಡ, ಜಡೇಶ್, ಕೆ.ನಾಗೇಶ್, ಅಂಜಿನಪ್ಪ, ಪಾಂಡು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net