

ಕುರುಗೋಡು: ವೀರಶೈವ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವುದನ್ನು ಖಂಡಿಸಿ ತಾಲೂಕು ಪರಿಶಿಷ್ಟ ಜಾತಿಗಳ ಸಮೂಹದಿಂದ ಪ್ರತಿಭಟನೆ ನಡೆಸಿಯಿತು.
ದೊಡ್ಡಬಸವೇಶ್ವ ದೇವಸ್ಥಾನದಿಂದ ರಾಜ ಬೀದಿ ಮೂಲಕ ಮೆರವಣಿಗೆ ನಡೆಸಿ, ತಹಸಿಲ್ ಕಚೇರಿ ತಲುಪಿತು. ಜಿಲ್ಲಾಧ್ಯಕ್ಷ ಎಲ್.ಗಂಗಾಧರ ಮಾತನಾಡಿ, ವೀರಶೈವ ಲಿಂಗಾಯತ ಜಂಗಮರು ಅಸ್ಪಶ್ಯರಲ್ಲ. ಇವರು ಉನ್ನತ ಸಾಮಾಜಿಕ ಸ್ಥಾನಮಾನ ಹೊಂದಿದ್ದಾರೆ. ಈಗ ಎಸ್ಸಿ ಮೀಸಲು ಕಬಳಿಸಲು ಮುಂದಾಗಿರುವುದು ಸರಿಯಲ್ಲ. ಇವರಿಗೆ ಪ್ರಮಾಣಪತ್ರ ನೀಡಿದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ನಿಜವಾದ ಜಂಗಮರು ಎಂದರೆ ಅಲೆಮಾರಿ ಬೇಡ ಬುಡ್ಗ ಜಂಗಮರು ಎಂದರು.
ಎಸ್.ರಾಮುಡು, ಹಂಡಿ ಜೋಗಿ ಸುಂಕಪ್ಪ, ವಿ.ಗುರಪ್ಪ, ಡಿ.ಸಿದ್ದಪ್ಪ, ಹರಿಜನ ರುದ್ರಪ್ಪ, ಕೊರವರ ಅಂಜಿನಪ್ಪ, ಕುಡತಿನಿ ಸಂಪತ್, ಪುರಸಭೆ ಸದಸ್ಯ ಶೇಖಣ್ಣ ಇತರರಿದ್ದರು.