ಕುರುಗೋಡಲ್ಲಿ ಅಕಾಲಿಕ ಮಳೆ, ಭತ್ತ, ಮೆಣಸಿನಕಾಯಿಗೆ ಹಾನಿ

030120 Kurugodu Unseason Rain
Published on

ಕುರುಗೋಡು: ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಗುರುವಾರ ಸಂಜೆ ದಿಢೀರ್ ಸುರಿದ ಮಳೆಯಿಂದ ರಾಶಿ ಮಾಡಿದ್ದ ಭತ್ತ, ಮೆಣಸಿನಕಾಯಿ ತೊಯ್ದಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ. ಕೊಯ್ಲು ಮಾಡಿದ ಭತ್ತ, ಮೆಣಸಿನಕಾಯಿ ಒಣಗಿಸಲು ಪಟ್ಟಣದ ಹೊರ ವಲಯದಲ್ಲಿ ರಾಶಿ ಹಾಕಿದ್ದು, ನಷ್ಟದ ಆತಂಕ ಎದುರಾಗಿದೆ. ಪಟ್ಟಣದ ತಹಸಿಲ್ ಕಚೇರಿ, ಎಪಿಎಂಸಿ, ಆಸ್ಪತ್ರೆ, ಸರ್ಕಾರಿ ಪ್ರೌಢ ಶಾಲೆ, ಬಸ್ ನಿಲ್ದಾಣ ಸೇರಿ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಹರಿದಿದೆ. ತರಕಾರಿ ಮಾರುಕಟ್ಟೆಯಲ್ಲಿ ನೀರು ನುಗ್ಗಿದ್ದರಿಂದ್ದ ಕಾಯಿಪಲ್ಲೆ, ಹಣ್ಣು ನೀರು ಪಾಲಾಗಿದ್ದು, ವ್ಯಾಪಾರಸ್ಥರಿಗೆ ನಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net