ಎರಡು ಬೈಕ್‌ಗಳ ನಡುವೆ ಡಿಕ್ಕಿ

Kurugodu Accident
Published on

ಕುರುಗೋಡು: ಪಟ್ಟಣ ಸಮೀಪದ ಶ್ರೀನಿವಾಸ್ ಕ್ಯಾಂಪ್ ಮುಖ್ಯರಸ್ತೆಯ ಮಾರೆಮ್ಮ ದೇವಸ್ಥಾನ ಬಳಿ ಗುರುವಾರ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗುತ್ತಿಗೆನೂರು ಗ್ರಾಮದ ದೊಡ್ಡಬಸಪ್ಪ (40) ಅವರು ಕುರುಗೋಡಿಗೆ ಬರುವ ವೇಳೆ ಹಾಗೂ ಬಾದನಹಟ್ಟಿ ಗ್ರಾಮದ ಕರಿ ಬಸವ (24) ಕೆರೆಕೆರೆ ಗ್ರಾಮಕ್ಕೆ ತೆರಳುತ್ತಿರುವಾಗ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡಿರುವ ಇಬ್ಬರನ್ನೂ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಿಬಸವ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಸಿಪಿಐ ಜಯಪ್ರಕಾಶ್ ಹಾಗೂ ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net