ಪದ್ಮಶಾಲಿ ಸಮಾಜದ ಬೆಳವಣಿಗೆ ಶ್ರಮಿಸಿ; ತುಮ್ಮಿನಕಟ್ಟೆಯ ಪದ್ಮಶಾಲಿ ಗುರುಪೀಠ ಮಹಾಸಂಸ್ಥಾನದ ಶ್ರೀ ಪ್ರಭುಲಿಂಗ ಸ್ವಾಮೀಜಿ ಸಲಹೆ

02022023 kurugodu news
Published on

ಕುರುಗೋಡು: ಹಿಂದುಳಿದ ಸಮಾಜಗಳು ಬೆಳೆಯಲು ರಾಜಕೀಯ ಪ್ರಾತಿನಿಧ್ಯ ಅತ್ಯವಶ್ಯ ಎಂದು ತುಮ್ಮಿನಕಟ್ಟೆಯ ಪದ್ಮಶಾಲಿ ಗುರುಪೀಠ ಮಹಾಸಂಸ್ಥಾನದ ಶ್ರೀ ಪ್ರಭುಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಶ್ರೀ ಭಕ್ತ ಮಾರ್ಕಂಡೇಯ ಜಯಂತಿ ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪದ್ಮಶಾಲಿ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಸಿನಿಮಾ ರಂಗದಲ್ಲಿ 150ಕ್ಕೂ ಹೆಚ್ಚು, ರಾಜಕೀಯದಲ್ಲಿ 25ಕ್ಕೂ ಹೆಚ್ಚು ಜನ ನಮ್ಮ ಸಮಾಜದವರು ಕ್ರಿಯಾಶೀಲರಾಗಿದ್ದಾರೆ. ಆದರೂ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸಮಾಜದವರ ನಿರುತ್ಸಾಹ ಎಂದರು.

ಕಂಪ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶಬಾಬು ಮಾತನಾಡಿ, ಸಮಾಜ ಬೆಳೆಯಬೇಕೆಂದರೆ ರಾಜಕೀಯಕ್ಕೆ ಬರಬೇಕು. ಪದ್ಮಶಾಲಿ ಸಮಾಜವನ್ನು ಬೆಳೆಸಲು ಪಕ್ಷಾತೀತವಾಗಿ ಶ್ರಮಿಸಲಾಗುವುದು ಎಂದರು. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಸರ್ಕಾರಗಳು ಅತೀ ಹಿಂದುಳಿದ ಸಣ್ಣ ಸಮಾಜಗಳನ್ನು ಮುಂದೆ ತರಲು ಹೆಚ್ಚು ಒತ್ತು ನೀಡಬೇಕು. ಈ ಸಮಾಜದ ಬೆಳವಣಿಗೆಗೆ ನಾನು ಬೆನ್ನೆಲುಬಾಗಿ ನಿಲ್ಲುವೆ ಎಂದರು.

ಸಮಾಜದ ತಾಲೂಕು ಅಧ್ಯಕ್ಷ ಎನ್.ಆಂಜನೇಯ, ಪ್ರಮುಖರಾದ ಪಿ.ಸೋಮಶೇಖರ್, ಬಿ.ಜಾನಕಿರಾಮ್, ಕೊಂಕತಿ ಕಾಳಪ್ಪ, ಬೂದಾರ್ಪು ಎನ್.ಗೋವಿಂದಪ್ಪ, ಬಿ.ಕೆ.ರಂಗಸ್ವಾಮಿ, ಕುಡದರಾಳು ಸತ್ಯನಾರಾಯಣ, ಸಿ.ಷಣ್ಮುಖ, ಚನ್ನ ಸಾಯಿಪ್ರಕಾಶ್, ಎಸ್.ಲೋಕಣ್ಣ, ದೇವರೆಡ್ಡಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net