ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಲಿ

kurugodu purana mangala
ಕುರುಗೋಡಿನಲ್ಲಿ ಶ್ರೀ ದೊಡ್ಡ ಬಸವೇಶ್ವರ ತಾತನ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಕೊಟ್ಟೂರೇಶ್ವರ ಸ್ವಾಮೀಜಿ ಮಾತನಾಡಿದರು. ಗಂಗಾಧರ ಸ್ವಾಮೀಜಿ, ದರೂರು ಪುರುಷೋತ್ತಮ ಗೌಡ, ಎಂ.ಬಸನಗೌಡ ಇತರರಿದ್ದರು.
Published on

ಕುರುಗೋಡು: ಭಗವಂತ, ಶರಣರ ಪುರಾಣ ಪ್ರವಚನ ಕೇಳುವುದರಿಂದ ಒಳ್ಳೆಯ ವಿಚಾರಗಳು ಮೂಡುವುದರೊಂದಿಗೆ ವ್ಯಕ್ತಿತ್ವ ವಿಕಸನವಾಗಲಿದೆ ಎಂದು ದರೂರಿನ ಕೊಟ್ಟೂರೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗುಡದೂರು ದೊಡ್ಡ ಬಸವೇಶ್ವರ ತಾತನ 6ನೇ ವರ್ಷದ ಪುರಾಣ ಕಾರ್ಯಕ್ರಮದ ಮಂಗಲೋತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.

ನಾಡಿನಾದ್ಯಂತ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಆಗ ದೇವರ ಆಶೀರ್ವಾದಿಂದ ಸಮೃದ್ಧ ಮಳೆ ಬೆಳೆಯಾಗಿ ನಾಡು ಸುಭಿಕ್ಷವಾಗಲಿದೆ. ಗುಡದೂರು ದೊಡ್ಡ ಬಸವೇಶ್ವರ ತಾತ ಮಹಾ ಶಿವಶರಣರು. ಹಾಲುಮತದ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಗೆ ಲಿಂಗ ದೀಕ್ಷೆ ನೀಡುವ ಮೂಲಕ ಜಾತಿ ಭೇದಗಳನ್ನು ತೊಡೆದು ಹಾಕಿದ ಮಹಾ ಮಹಿಮ ಎಂದರು.

ನಾಟ್ಯ ಭೈರವಿ ಕಲಾ ಕೇಂದ್ರದ ಜಿ.ವಿಜಯಲಕ್ಷ್ಮೀ ಭರತ ನಾಟ್ಯ ಪ್ರದರ್ಶನ ನೀಡಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖರಾದ ಎಂ.ಚಂದ್ರಶೇಖರಯ್ಯ ಸ್ವಾಮಿ, ಕೊಂಚಿಗೇರಿ ಶಿವ, ಎಚ್.ವೀರಾಪುರದ ಜಡಯ್ಯಸ್ವಾಮಿ, ಪಂಪಯ್ಯ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net