ದೊಡ್ಡಬಸವೇಶ್ವರ ರಥೋತ್ಸವ ಅದ್ದೂರಿ

Kurugodu doddabasaveshwara Chariot Festival
ಕುರುಗೋಡು ಶ್ರೀ ದೊಡ್ಡಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ಜರುಗಿತು.
Published on

ಕುರುಗೋಡು: ಪಟ್ಟಣದ ಶ್ರೀ ದೊಡ್ಡಬಸವೇಶ್ವರ ಜಾತ್ರೋತ್ಸವ ನಿಮಿತ್ತ ಶುಕ್ರವಾರ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.

ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರದ ಕಟ್ಟೆಮನೆ ನಾಯಕ ಸಮುದಾಯದವರು ಗುರುವಾರ ಉಪವಾಸ ಆಚರಿಸಿ, ಧೂಳುಗಾಯಿ ಹೊತ್ತು ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಧೂಳುಗಾಯಿ ಒಡೆದು, ಕುಂಭವನ್ನು ಮೆರವಣಿಗೆ ಮೂಲಕ ದೇವರಿಗೆ ಅರ್ಪಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಪಾದಯಾತ್ರೆ ಬಂದ ಭಕ್ತರಿಗೆ ಮಾರ್ಗದಲ್ಲಿ ನೀರು, ಮಜ್ಜಿಗೆ, ಅನ್ನ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net