ಶಾಂತಿ ಕದಡಿದರೆ ಕಠಿಣ ಕ್ರಮ

22 kurugodu 2
ಕುರುಗೋಡು ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಡಿವೈಎಸ್ಪಿ ಪ್ರಸಾದ ಗೋಖಲೆ, ಉಪ ತಹಸೀಲ್ದಾರ್ ವಿಜಯಕುಮಾರ್, ಸಿಪಿಐ ವಿಶ್ವನಾಥ ಹಿರೇಗೌಡ್ರ, ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ ಇತರರಿದ್ದರು.
Published on

ಕುರುಗೋಡು: ಗಣೇಶ ಹಬ್ಬದಲ್ಲಿ ಕಲಹ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಡಿವೈಎಸ್ಪಿ ಪ್ರಸಾದ್ ಗೋಖಲೆ ಹೇಳಿದರು.

ಪಟ್ಟಣದ ಠಾಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಸಾಮಾಜಿಕ ಮಾಧ್ಯಮಗಳ ಮೂಲಕ ಶಾಂತಿ ಕದಡುವ, ಅಪಪ್ರಚಾರ ನಡೆಸುವವರ ಹಾಗೂ ಕೋಮು ದ್ವೇಷ ಸೃಷ್ಟಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

ಸಿಪಿಐ ವಿಶ್ವನಾಥ್ ಹಿರೇಗೌಡ್ರ ಮಾತನಾಡಿ, ಗಣೇಶ ಪ್ರತಿಷ್ಠಾಪನೆಗೆ ಪೊಲೀಸ್ ಠಾಣೆಯಲ್ಲೇ ಎಲ್ಲ ಇಲಾಖೆಗಳ ಅನುಮತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿಯೊಬ್ಬರೂ ನಿಯಮ ಪಾಲಿಸಬೇಕು. ಸುಪ್ರೀಂ ಕೋರ್ಟ್ ಸೂಚನೆಯಂತೆ ಸ್ಪೀಕರ್‌ಗೆ ಅನುಮತಿ ನೀಡಲಾಗುವುದು. ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.

ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿ, ದಮ್ಮೂರು, ಬಾದನಹಟ್ಟಿ ಗ್ರಾಮದಲ್ಲಿ ಕಳೆದ ಬಾರಿ ಕಲಹದ ಹಿನ್ನೆಲೆಯಲ್ಲಿ ಈ ಬಾರಿ ಮೆರವಣಿಗೆ ಮತ್ತು ಸ್ಪೀಕರ್‌ಗೆ ಅನುಮತಿ ನಿಷೇಧಿಸಲಾಗಿದೆ. ಕಲಹಕ್ಕೆ ಕಾರಣವಾಗುವ ಹಾಡುಗಳನ್ನು ಹಾಕಿದರೆ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಉಪ ತಹಸೀಲ್ದಾರ್ ವಿಜಯಕುಮಾರ್, ತಾಪಂ ವ್ಯವಸ್ಥಾಪಕ ಅನಿಲ್ ಕುಮಾರ್, ಅಗ್ನಿಶಾಮಕ ಅಧಿಕಾರಿ ಶಿವಕುಮಾರ್, ಜೆಸ್ಕಾಂ ಅಧಿಕಾರಿ ಶೆಕ್ಷಾವಲಿ, ಪುರಸಭೆ ಅಧ್ಯಕ್ಷ ಶೇಖಣ್ಣ, ಸದಸ್ಯರಾದ ನಟರಾಜ್, ನರಸಪ್ಪ, ಪ್ರಮುಖರಾದ ರಾಘವೇಂದ್ರ, ಬಂಗಿ ಮಲ್ಲಯ್ಯ, ಜಗದೀಶ, ಮಂಜುನಾಥ್, ಭೀಮೇಶ್, ಕಲ್ಲುಗುಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net