ಪೌಷ್ಟಿಕ ಆಹಾರ, ತಾಯಿಹಾಲಿನ ಮಹತ್ವ ತಿಳಿಸಿ

KURUGODU Anganavadi
ಕೆರೆಕೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಪೌಷ್ಟಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಘವ ಶೆಟ್ಟಿ, ಪ್ರಮುಖರಾದ ಶೇಕ್ಷಾವಲಿ, ಬಸವರಾಜ, ಚಂದ್ರಿಕಾ ಇತರರಿದ್ದರು.
Published on

ಕುರುಗೋಡು: ಆರೋಗ್ಯವಂತ ಮಗುವಿನಿಂದ ಸ್ವಸ್ಥ ಸಮಾಜ ಕಟ್ಟಬಹುದು. ಹಾಗಾಗಿ, ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಘವ ಶೆಟ್ಟಿ ಹೇಳಿದರು.

ಕೆರೆಕೆರೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪೌಷ್ಟಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗರ್ಭಿಣಿಯರಿಗೆ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ, ಸಂಸ್ಥೆಯಲ್ಲಿ ಹೆರಿಗೆ, ತಾಯಿಹಾಲಿನ ಮಹತ್ವ, ಅಂತರದ ಹೆರಿಗೆ, ಕುಟುಂಬ ಕಲ್ಯಾಣ ತಾತ್ಕಾಲಿಕ, ಶಾಶ್ವತ ವಿಧಾನ, ಪಿಎಂಜೆವೈ ಕಾರ್ಡ್ ನೋಂದಣಿ, ಆರೋಗ್ಯ ಸಮಸ್ಯೆಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಕುರಿತು ತಿಳಿಸಬೇಕು ಎಂದರು. ಪ್ರಮುಖರಾದ ಶೇಕ್ಷಾವಲಿ, ಬಸವರಾಜ, ಚಂದ್ರಿಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net