ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ: ಕುರುಗೋಡಿನಲ್ಲಿ ಎಸ್ಪಿ ಸೈದುಲು ಅದಾವತ್ ಮಾಹಿತಿ

24122021 Kurugodu muncipal election security
Published on


ಕುರುಗೋಡು: ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದು ಎಸ್ಪಿ ಸೈದುಲು ಅದಾವತ್ ಹೇಳಿದರು.

ಪಟ್ಟಣದ ಮುಷ್ಟಗಟ್ಟೆ ರಸ್ತೆಯ ಶಾಸಕರ ಸರ್ಕಾರಿ ಮಾದರಿ ಹಿಪ್ರ ಶಾಲೆಯ ಮತಗಟ್ಟೆಗೆ ಗುರುವಾರ ಭೇಟಿ ನೀಡಿ ಮಾತನಾಡಿದರು.

ಎಲ್ಲ 23 ವಾರ್ಡ್‌ಗಳ ಮತದಾನ ಕೇಂದ್ರಗಳಲ್ಲಿ ಅಹಿತಕರ ಘಟನೆ ಜರುಗದಂತೆ ತಲಾ ಒಬ್ಬರು ಡಿವೈಎಸ್ಪಿ, ಸಿಪಿಐ ಹಾಗೂ 4 ಪಿಎಸ್‌ಐ, 10 ಎಎಸ್‌ಐ, ಹಾಗೂ 55 ಪೇದೆಗಳನ್ನು ನಿಯೋಜಿಸಲಾಗಿದೆ. ಐದು ಸೂಕ್ಷ್ಮ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮತದಾರರು ಯಾವುದೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸಬೇಕು. ಮತದಾರರಿಗೆ ಧೈರ್ಯ ತುಂಬುವ ಸಲುವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ಮಾಡಲಾಗುವುದು ಎಂದು ತಿಳಿಸಿದರು. ಡಿಎಸ್‌ಡಿ ಘಟಕದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನೆ, ಸಿಪಿಐ ಚಂದನ್‌ಗೋಪಾಲ್.ವಿ, ಪಿಎಸ್‌ಐ ಮೌನೇಶ್ ರಾಥೊಡ್.ಯು, ಪ್ರೊಬೇಷನರಿ ಪಿಎಸ್‌ಐ ಸದ್ದಾಂ ಹುಸೇನ್, ಎಎಸ್‌ಐ ಹೂವಣ್ಣ, ಎಎಸ್‌ಐ ಚಂದ್ರಮೌಳಿ, ಎಎಸ್‌ಐ ಅನ್ಸರ್, ಪೇದೆಗಳಾದ ದೇವೇಂದ್ರಪ್ಪ, ಶರಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net