ಕುಡತಿನಿಯಲ್ಲಿ ಓಕುಳಿಯಾಟ ಜೋರು

23 kurugodu 2
Published on

ಕುರುಗೋಡು: ಪಟ್ಟಣ ಸಮೀಪದ ಕುಡತಿನಿಯಲ್ಲಿ ಯುಗಾದಿ ಹಬ್ಬದ ಮರುದಿನವಾದ ಗುರುವಾರ ಓಕುಳಿಯಾಡುವ ಮೂಲಕ ಹಬ್ಬದ ಕರಿ ಆಚರಿಸಲಾಯಿತು.

ಮಕ್ಕಳು, ಯುವಕರು ಬೆಳಗ್ಗೆಯಿಂದಲೇ ಬಣ್ಣ ಬೆರೆಸಿದ ನೀರನ್ನು ಪರಸ್ಪರ ಎರಚಿಕೊಂಡು ಹರ್ಷಿಸಿದರು. ಬಿರಿ ಬಿಸಿಲು ಲೆಕ್ಕಿಸದೇ ಹಿರಿ-ಹಿಕರಿಯರೂ ಓಕುಳಿ ಆಡಿ, ನಲಿದರು.

ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹೋಳಿಹುಣ್ಣಿಮೆ ಮರುದಿನ ಬಣ್ಣದಾಟ ಆಚರಿಸುವುದಿಲ್ಲ. ಬದಲಿದೆ ಯುಗಾದಿಯ ಮರು ದಿವನ ಓಕುಳಿಯಾಡುತ್ತಾರೆ. ದೈನಂದಿನ ಜಂಜಾಟದಿಂದ ಹೊರ ಬಂದು, ಎಲ್ಲರೊಂದಿಗೆ ಬೆರೆತು, ಬಣ್ಣದಾಟದಲ್ಲಿ ತೊಡಗುವುದು ನೋಡುಗರ ಕಣ್ಮನ ಸೆಳೆಯುವಂತಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net