ಕೂರಿಗೆ ಪದ್ಧತಿಯಿಂದ ಭತ್ತ ನಾಟಿ ಮಾಡಿ

Kurgodu Koorige
ಕುರುಗೋಡು ಹೊರವಲಯದಲ್ಲಿ ಕೂರಿಗೆ ಮೂಲಕ ಬೆಳೆದ ಭತ್ತದ ಗದ್ದೆಗೆ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೃಷಿ ಇಲಾಖೆ ಸಹಾಯಕ ನಿರ್ದೆಶಕ ದಯಾನಂದ, ಕೃಷಿ ಅಧಿಕಾರಿ ಎಂ.ದೇವರಾಜ್ ಇದ್ದರು.
Published on

ಕುರುಗೋಡು: ಪಟ್ಟಣದ ಹೊರವಲಯದಲ್ಲಿ ಪ್ರಗತಿ ಪರ ರೈತ ಹಿಮಾಮ್‌ಸಾಬ್ ಅವರು ಕೂರಿಗೆ ಪದ್ಧತಿ ಮೂಲಕ ಬೆಳೆದ ಭತ್ತದ ಗದ್ದೆಗೆ ಕೃಷಿ ಇಲಾಖೆ ಎಡಿ ದಯಾನಂದ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲಿಸಿತು.

ಎಡಿ ದಯಾನಂದ ಮಾತನಾಡಿ, ಕೂರಿಗೆ ಭತ್ತದ ಬೆಳೆಗೆ ಪೋಷಕಾಂಶ ಕಡಿಮೆಯಾಗಿದ್ದು, ಅದಕ್ಕೆ ಜಿಂಕ್ ಸಲ್ಫೇಟ್ ಔಷಧ ಸಿಂಪಡಿಸಬೇಕೆಂದು ಸಲಹೆ ನೀಡಿದರು. ಕೂರಿಗೆ ಪದ್ಧತಿ ಮೂಲಕ ಭತ್ತ ನಾಟಿ ಮಾಡುವುದರಿಂದ ಬೆಳಕು ಮತ್ತು ಗಾಳಿ ಚೆನ್ನಾಗಿ ಬರುತ್ತಿದೆ. ಇದರಿಂದ ರೋಗ-ರುಜಿನಗಳು ಕಡಿಮೆಯಾಗುತ್ತವೆ ಎಂದು ಸಲಹೆ ನೀಡಿದರು.

ರೈತ ಸಂಪರ್ಕ ಕೇಂದ್ರ ಹಿರಿಯ ಕೃಷಿ ಅಧಿಕಾರಿ ಎಂ.ದೇವರಾಜ ಮಾತನಾಡಿ, ರೈತರು ಕೂರಿಗೆಯಿಂದ ಭತ್ತ ನಾಟಿ ಮಾಡುವುದನ್ನು ಕಲಿಯಬೇಕು. ಇದರಿಂದ ಕೂಲಿ ಕಾರ್ಮಿಕರ ಬೇಡಿಕೆ, ನೀರಿನ ಬಳಕೆ ಕಡಿಮೆಯಾಗುತ್ತದೆ. ಅಧಿಕ ಲಾಭ ಪಡೆಯಬಹುದು ಎಂದರು. ಕೃಷಿ ಅಧಿಕಾರಿ ಸೋಮಶೇಖರ, ಹೊನ್ನೂರುಸಾಬ್, ಅನುಗಾರ ಎ.ಕೆ.ಮಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net