

ಕುರುಗೋಡು: ಕ್ರೀಡಾಪಟುಗಳ ಅನುಕೂಲಕ್ಕಾಗಿ ಇನ್‌ಡೋರ್ ಸ್ಟೇಡಿಯಂ ಶೀಘ್ರ ನಿರ್ಮಾಣಗೊಳ್ಳಲಿದೆ ಎಂದು ಸಂಡೂರು ಕ್ಷೇತ್ರದ ಶಾಸಕ ಈ.ತುಕಾರಾಮ್ ಹೇಳಿದರು.
ಕುಡತಿನಿ ಪಟ್ಟಣದ ಗೌತಮ ನಗರದಲ್ಲಿ ಡಿಎಂಎಫ್ ಅನುದಾನದ ಮೂರು ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಕುಡತಿನಿಯಲ್ಲಿ ಸುಸಜ್ಜಿತ 30 ಬೆಡ್ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಎಂಟು ಕೋಟಿ ರೂ., 28 ಕೋಟಿ ರೂ. ವೆಚ್ಚದ ನಾಲ್ಕು ಲೈನ್ಸ್ ರಸ್ತೆ ನಿರ್ಮಾಣ, ವಾಲ್ಮೀಕಿ ನಗರದ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಒಂದು ಕೋಟಿ ರೂ.ಅನುಮೋದನೆ ನೀಡಲಾಗಿದೆ ಎಂದರು.
ಪಪಂ ಅಧ್ಯಕ್ಷ ಮಂಜುನಾಥ, ಮಾಜಿ ಅಧ್ಯಕ್ಷ ವಿ.ರಾಜಶೇಖರ್, ಪ್ರಮುಖರಾದ ಚಂದ್ರಾಯಿ ದೊಡ್ಡಬಸಪ್ಪ, ವಿ.ಸಿ.ಕೆ.ಚಂದ್ರಪ್ಪ, ಪಲ್ಲೇದ ಪ್ರಭುಗೌಡ, ದೊಡ್ಡಪ್ಪ, ರಾಮಲಿಂಗಪ್ಪ, ಯು.ಸೀನಪ್ಪ, ಆರ್. ಸತ್ಯಪ್ಪ, ಸುಂಕಪ್ಪ, ಡೊಮ್ಮೆ ಎರ‌್ರಿಸ್ವಾಮಿ, ಎನ್‌ಟಿಆರ್.ರಾಮಾಂಜಿನಿ, ಕೆಂಚಪ್ಪ, ವೆಂಕಟೇಶ, ಎ. ರಾಜ, ಎ.ಸದಾಕಲಿ, ಎಂ.ವೀರೇಶ, ಎ.ಭೀಮೇಶ್, ಗುಂಡಪ್ಪ, ಹನುಮೇಶ, ಭೀಮ, ಶೇಖರ್ ಇತರರಿದ್ದರು.