

ಕುರುಗೋಡು: ತಾಲೂಕಿನ ಮದಿರೆ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿಟ್ಟಿದ್ದ ಗುಡಿಸಲಿನ ಮೇಲೆ ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ್ ನೇತೃತ್ವದ ತಂಡ ಶನಿವಾರ ದಾಳಿ ನಡೆಸಿತು. ಗ್ರಾಮದ ಚಟ್ನಿ ಹನುಮಂತಪ್ಪನಿಗೆ ಸೇರಿದ ಗುಡಿಸಲಿನಲ್ಲಿ ಕೋಳೂರು ಶೇಕ್ಷಾವಾಲಿ ಮತ್ತು ಕಾಸಿಂ ಬೀ ಪಡಿತರ ಅಕ್ಕಿ ಸಂಗ್ರಹಿಸಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಜಂಟಿ ನಿರ್ದೇಶಕ ಶ್ರೀಧರ್, ಆಹಾರ ಶಿರಸ್ತೇದಾರ್ ರವಿ ರಾಥೋಡ್, ಪಿಎಸ್‌ಐ ಕೃಷ್ಣಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ ಶನಿವಾರ ದಾಳಿ ನಡೆಸಿ, 78 ಚೀಲದಲ್ಲಿ ಸಂಗ್ರಹಿಸಿದ್ದ 35.10 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆದರು. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.