ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಗಾಗಿ ಪ್ರವಾಸ

Kurugodu students tour
ಕುರುಗೋಡಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಚಿಣ್ಣರ ವನ ದರ್ಶನ ಪ್ರವಾಸಕ್ಕೆ ಮಂಗಳವಾರ ತೆರಳಿದರು. ಮುಖ್ಯ ಶಿಕ್ಷಕ ಡಿ.ಎಂ.ಮಲ್ಲಿಕಾರ್ಜುನ, ಶಿಕ್ಷಕರಾದ ಬಿ.ಶ್ರೀಕಾಂತ್, ಚಿನ್ನಬೋರನಾಯಕ ಇತರರಿದ್ದರು.
Published on

ಕುರುಗೋಡು: ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ ಚಿಣ್ಣರ ವನ ದರ್ಶನ ಪ್ರವಾಸಕ್ಕೆ ಉಪ ಪ್ರಾಚಾರ್ಯ ಮಾರುತಿ ಗಾಳಿ ಮಂಗಳವಾರ ಚಾಲನೆ ನೀಡಿದರು.

ವಿದ್ಯಾರ್ಥಿಗಳಿಗೆ ಅರಣ್ಯ ಪ್ರದೇಶದ ಬಗ್ಗೆ ಮಾಹಿತಿ ನೀಡುವುದು ಮತ್ತು ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಚಿಣ್ಣರ ವನ ದರ್ಶನ ಪ್ರವಾಸ ಆಯೋಜಿಸಿದೆ. 46 ವಿದ್ಯಾರ್ಥಿಗಳು ಪ್ರವಾಸ ಕೈಗೊಂಡಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಜಂಗಲ್ ರೆಸಾರ್ಟ್‌ನಲ್ಲಿ ಒಂದು ದಿನ ವಾಸ್ತವ್ಯ ಹೂಡಲಿರುವ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವೀಡಿಯೋ ದೃಶ್ಯಾವಳಿಗಳ ಮೂಲಕ ವನ್ಯಜೀವಿ ಹಾಗೂ ಅರಣ್ಯ ರಕ್ಷಣೆ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.

ವಿದ್ಯಾರ್ಥಿಗಳು ದರೋಜಿ ಕರಡಿ ಧಾಮ, ಕಮಲಾಪುರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಜುವಾಲಾಜಿಕಲ್ ಪಾರ್ಕ್, ಕನ್ನಡ ವಿಶ್ವವಿದ್ಯಾಲಯ ಮತ್ತು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net