ಸಂಜೀವಿನಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

Kurugodu Masika sante
ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಪಂ ಕಚೇರಿಯಲ್ಲಿ ಮಾಸಿಕ ಸಂತೆಗೆ ತಾಪಂ ಇಒ ನಿರ್ಮಲಾ ಚಾಲನೆ ನೀಡಿದರು. ನರೇಗಾ ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ, ಗ್ರಾಪಂ ಅಧ್ಯಕ್ಷ ಕರಿಯಪ್ಪ, ಪಿಡಿಒ ಮಲ್ಲಿಕಾರ್ಜುನ, ಅಧಿಕಾರಿ ಚಂದ್ರಶೇಖರ ಇದ್ದರು.
Published on

ಕುರುಗೋಡು: ಮಹಿಳೆಯರು ನಿರಂತರ ಆದಾಯ ಗಳಿಸಲು ಸಂಜೀವಿನಿ ಯೋಜನೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಯೋಜನೆಯ ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಾಪಂ ಇಒ ನಿರ್ಮಲಾ ಹೇಳಿದರು.

ಬಾದನಹಟ್ಟಿ ಗ್ರಾಪಂನಲ್ಲಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಜೀವಿನಿ ಯೋಜನೆ ಸ್ವ ಸಹಾಯ ಗುಂಪಿಗೆ, ಮಹಿಳಾ ಕಿರು ಉದ್ದಿಮೆದಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುತ್ತದೆ. ಮಹಿಳೆಯರು ತಯಾರಿಸುವ ಉಪ್ಪಿನಕಾಯಿ ಹಾಗೂ ಇತರ ಉತ್ಪನ್ನ ಖರೀದಿಸಿ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು.

ನರೇಗಾ ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ ಮಾತನಾಡಿ, ಯೋಜನೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಸಂತೆಕಟ್ಟೆ ಸಂಜೀವಿನಿಯಲ್ಲಿ ಮಾಸಿಕ ಸಂತೆ, ವಾರದ ಸಂತೆ ಆಯೋಜಿಸಲಾಗುವುದು ಎಂದರು. ಗ್ರಾಪಂ ಅಧ್ಯಕ್ಷ ಕರಿಯಪ್ಪ, ಪಿಡಿಒ ಮಲ್ಲಿಕಾರ್ಜುನ, ಅಧಿಕಾರಿಗಳಾದ ಚಂದ್ರಶೇಖರ, ಮಲ್ಲಿಕಾರ್ಜುನ, ಅಡಿವೆಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net