ವಲಸೆ ಬಂದ ಕುರಿಗಾಹಿಗಳಿಗೆ ಆರೋಗ್ಯ ಜಾಗೃತಿ

Kurgodu Helath Camp
ಓರ್ವಾಯಿ ಗ್ರಾಮದ ಹೊಲ ಗದ್ದೆಗಳಲ್ಲಿ ಬೀಡುಬಿಟ್ಟಿರುವ ಕುರಿಗಾಹಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಜಾಗೃತಿ ಮೂಡಿಸಿದರು. ಆರೋಗ್ಯ ಕ್ಷೇತ್ರ ಶಿಕ್ಷಣಧಿಕಾರಿ ರಾಘವ ಶೆಟ್ಟಿ, ಪಿಎಚ್‌ಸಿಒ ಶಾಂತಮ್ಮ, ಕುರಿಗಾಹಿ ಚೈತ್ರಾ, ವೆಂಕಣ್ಣ ಇತರರಿದ್ದರು.
Published on

ಕುರುಗೋಡು: ಓರ್ವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಗ್ರಾಮದ ಹೊರವಲಯದ ಹೊಲಗದ್ದೆಗಳಲ್ಲಿ ಬೀಡು ಬಿಟ್ಟಿರುವ ಕುರಿಗಾಹಿಗಳ ಶೆಡ್‌ಗಳಿಗೆ ಶನಿವಾರ ಭೇಟಿ ನೀಡಿ ಆರೋಗ್ಯ ಜಾಗೃತಿ ಮೂಡಿಸಿದರು.

ಆರೋಗ್ಯ ಕ್ಷೇತ್ರ ಶಿಕ್ಷಣಧಿಕಾರಿ ರಾಘವ ಶೆಟ್ಟಿ ಮಾತನಾಡಿ, ಓರ್ವಾಯಿ ಗ್ರಾಮದ ಸುತ್ತಲಿನ ಹೊಲ ಗದ್ದೆಗಳಲ್ಲಿ ಕುರಿಗಾಹಿಗಳು ಬೇರೆ ಕಡೆಯಿಂದ ವಲಸೆ ಬಂದು ಜೀವನ ನಡೆಸುತ್ತಿದ್ದಾರೆ.

ಅವರ ಕುಟುಂಬಗಳಲ್ಲಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಪುರುಷರು ಕೆಲಸದಲ್ಲಿ ತೊಡಗಿಸಿಕೊಂಡು ಆರೋಗ್ಯದ ಕಡೆ ಗಮನಹರಿಸಲ್ಲ. ಹೀಗಾಗಿ ಅವರಿರುವ ಸ್ಥಳಕ್ಕೆ ತೆರಳಿ ಆರೋಗ್ಯ ವಿಚಾರಿಸಿ, ತಾಯಿ ಕಾರ್ಡ್ ಮತ್ತು ಮಕ್ಕಳಿಗೆ ಲಸಿಕೆ ಪಡೆದಿರುವುದರ ಬಗ್ಗೆ ಮಾಹಿತಿ ಪಡೆಯಲಾಯಿತು.

ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ತಪಾಸಣೆಗೆ ಒಳಪಡಿಸಿ ರಕ್ತ ಪರೀಕ್ಷೆ ಮಾಡಿಸಲಾಯಿತು. ಆರೋಗ್ಯ ಸಮಸ್ಯೆ ಇದ್ದರೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುವಂತೆ ತಿಳಿಸಲಾಗಿದೆ ಎಂದರು. 30 ವರ್ಷ ಮೇಲ್ಪಟ್ಟವರಿಗೆ ಮಧುಮೇಹ, ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು. ಪಿಎಚ್‌ಸಿಒ ಶಾಂತಮ್ಮ, ಕುರಿಗಾಹಿ ಚೈತ್ರಾ, ವೆಂಕಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net