ಮನಃಶಾಂತಿಗೆ ಲಿಂಗ, ರುದ್ರಾಕ್ಷಿ ಧರಿಸಿ

Kurgodu Pravachana
ಬಾದನಹಟ್ಟಿ ಗ್ರಾಮದ ಬ್ರಹ್ಮನಿಷ್ಠ ಬಸಯ್ಯ ತಾತನ ಮಠದಲ್ಲಿ ಸೊಲ್ಲಾಪುರ ಶ್ರೀ ಸಿದ್ಧರಾಮೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು. ಕರಿಬಸವ ಶರಣರು, ಕೆ.ಮೌನೇಶ್ ಆಚಾರ್, ಕೆ.ಮಂಜುನಾಥ, ಎರ‌್ರಿ ನಾಗೇಶ್, ಕರಿಬಸವನ ಗೌಡ ಇತರರಿದ್ದರು.
Published on

ಕುರುಗೋಡು: ನಿತ್ಯ ಪಂಚಾಕ್ಷರಿ ಮಂತ್ರ ಪಠಣದಿಂದ ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಬಾದನಹಟ್ಟಿಯ ಕರಿಬಸವ ಶರಣರು ಅಭಿಪ್ರಾಯಪಟ್ಟರು.

ಬಾದನಹಟ್ಟಿ ಗ್ರಾಮದ ಬ್ರಹ್ಮನಿಷ್ಠ ಬಸಯ್ಯ ತಾತನ ಮಠದಲ್ಲಿ ಸೊಲ್ಲಾಪುರ ಶ್ರೀ ಸಿದ್ಧರಾಮೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಿಂಗ, ಭಸ್ಮ ಮತ್ತು ರುದ್ರಾಕ್ಷಿ ಧಾರಣೆಯಿಂದ ಭವರೋಗಗಳಿಂದಲೂ ರಕ್ಷಿಸಿಕೊಳ್ಳಬಹುದು. ನಮ್ಮ ಪೂರ್ವಜರು ಆರೋಗ್ಯ ಕರ ಜೀವನ ನಡೆಸಿದ್ದಾರೆ ಎಂದರು.

ಬಾದನಹಟ್ಟಿಯ ಕೆ.ಮೌನೇಶ್ ಆಚಾರ್ ಪುರಾಣ ಪ್ರವಚನ ನೀಡಿದರು. ಬಾದನಹಟ್ಟಿಯ ಕೆ.ಮಂಜುನಾಥ ಪುರಾಣ ಪಠಣ ಮಾಡಿದರು. ಎರ‌್ರಿ ನಾಗೇಶ್ ಮತ್ತು ಕರಿಬಸವನ ಗೌಡ ಹಾರ್ಮೋನಿಯಂ, ಎಚ್.ಮಲ್ಲಿಗೌಡ, ಎ.ಪಾಂಡುರಂಗ ತಬಲಾ ಸಾಥ್ ನೀಡಿದರು. ಎಂ.ಸೋಮಶೇಖರಯ್ಯಸ್ವಾಮಿ, ಚನ್ನನ ಗೌಡ, ಕೆ.ಮಾರೆಣ್ಣ, ಮುಂಡರಗಿ ಅಂಜಿನಪ್ಪ, ಶಾಪುರ ಬಸವರಾಜಪ್ಪ, ಎರ‌್ರೆಗೌಡ, ಶೇಖರಯ್ಯ ಸ್ವಾಮಿ, ಮರೇಗೌಡ ಸಂಗೀತ ಸೇವೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net