

ಕುರುಗೋಡು: ಇಲ್ಲಿನ ಪೊಲೀಸ್ ಠಾಣೆಗೆ ಎಸ್‌ಕೆಡಿಆರ್‌ಡಿಪಿಯ ಸಿರಗುಪ್ಪ ತಾಲೂಕಿನ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಭೇಟಿ ನೀಡಿ, ಪೊಲೀಸರ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ಪಡೆದುಕೊಂಡರು.
ಪಿಎಸ್‌ಐ ಸುಪ್ರೀತ್ ಮಾತನಾಡಿ, ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿದ್ದು, ಲೈಂಗಿಕ ಕಿರುಕುಳ, ದೌರ್ಜನ್ಯ ಸೇರಿ ಇತರ ಸಮಸ್ಯೆಗಳಿದ್ದರೆ ಮಹಿಳೆಯರು ಧೈರ್ಯದಿಂದ ಬಂದು ದೂರು ನೀಡಬಹುದು. ಸಣ್ಣಪುಟ್ಟ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳವಾದರೆ ಮನೆಯಲ್ಲೇ ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಿಕೊಂಡು ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.
ಮನೆಯಲ್ಲಿ ಹೆಚ್ಚಿನ ಹಣ ಮತ್ತು ಚಿನ್ನ ಸಂಗ್ರಹಿಸದೆ ಬ್ಯಾಂಕ್ ಲಾಕರ್‌ನಲ್ಲಿ ಇರಿಸಬೇಕು. ಮನೆಗೆ ಬೀಗ ಹಾಕಿ ಊರಿಗೆ ಹೋಗುವುದಿದ್ದರೆ ನೆರೆ ಮನೆಯವರು ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ನಂತರ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ಪಡೆದರು. ಠಾಣಾಧಿಕಾರಿ ಶಿವಕುಮಾರ್, ಮೇಲ್ವಿಚಾರಕಿ ನಾಗವೇಣಿ, ಸೇವಾಪ್ರತಿನಿಧಿ ನಂದೀಶ, ಶಾಕೀರ ಇದ್ದರು.