

ಕುರುಗೋಡು: ಪಟ್ಟಣದಿಂದ ಕಂಪ್ಲಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಭತ್ತದ ರಾಶಿ ಮಾಡದಂತೆ ರೈತರಿಗೆ ಅರಿವು ಮೂಡಿಸುವುದರ ಜತೆಗೆ ಕೂಡಲೇ ತೆರವುಗೊಳಿಸುವಂತೆ ಪಿಎಸ್‌ಐ (ಕ್ರೈಂ ವಿಭಾಗ) ಕರಿಯಮ್ಮ ಸೂಚನೆ ನೀಡಿದರು.
ವಾಹನ ಸಂಚಾರ ಹೆಚ್ಚಾಗಿರುವ ಹೆದ್ದಾರಿಯಲ್ಲಿ ಭತ್ತದ ರಾಶಿ ಮಾಡುವುದರಿಂದ ಸಂಚಾರಕ್ಕೆ ಅಡಚಣೆ ಜತೆಗೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಏ.18 ರಂದು ವಿಜಯವಾಣಿ ಪತ್ರಿಕೆ ‘ರಸ್ತೆಯಲ್ಲೇ ಭತ್ತದ ರಾಶಿ ಸಂಚಾರ ಸಿಕ್ಕು’ ಎಂಬ ಶೀರ್ಷಿಕೆಯ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಮರುದಿನವೇ ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ಅರಿವು ಮೂಡಿಸಿ ಭತ್ತದ ರಾಶಿ ತೆರವಿಗೆ ಸೂಚಿಸಿದರು. ಇದರಿಂದ ವಾಹನ ಸವಾರರು ನಿರಾಳರಾದರು.