ಕುರುಬರಮಲ್ಲೂರ ಗ್ರಾಪಂಗೆ ಶ್ರೀಕಾಂತ ಅಧ್ಯಕ್ಷ

SVR GP
Published on

ಸವಣೂರ: ತಾಲೂಕಿನ ಕುರುಬರಮಲ್ಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಶ್ರೀಕಾಂತ ದೇವಿಹೊಸೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿಶ್ವಾಸದಿಂದ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಶ್ರೀಕಾಂತ ದೇವಿಹೊಸೂರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ, ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಅವರು ಅವಿರೋಧ ಆಯ್ಕೆ ಘೋಷಿಸಿ ಪ್ರಮಾಣ ಪತ್ರ ವಿತರಿಸಿದರು.

ಗ್ರಾಪಂ ಉಪಾಧ್ಯಕ್ಷೆ ಲಲಿತವ್ವ ದೊಡ್ಡಗೌಡ್ರ, ಸದಸ್ಯರಾದ ನವೀನ ಸವಣೂರ, ಗಂಗಪ್ಪ ದೊಡ್ಡಪೂಜಾರ, ಯಲ್ಲಮ್ಮ ಅಜ್ಜಣ್ಣನವರ, ಹಜರಾಂಬಿ ನದಾಪ್, ಎಂ.ಎನ್. ಮಲ್ಲಾಡದ, ಲಕ್ಷ್ಮವ್ವ ನಾಯಕ್, ಬಸವರಾಜ ತಳವಾರ, ಪ್ರಮುಖರಾದ ಕನಕದಾಸ ನಾಯಕ್, ಗಾಳೆಪ್ಪ ದೊಡ್ಡಪೂಜಾರ, ಚಂದ್ರು ಸಣ್ಣಪೂಜಾರ, ರಜನಿಕಾಂತ ದೇವಿಹೊಸೂರ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net