ಅಬಿವೃದ್ಧಿಗೆ ಶಿಕ್ಷಣ ಮುಖ್ಯ: ರಾಘವೇಂದ್ರ

kuruba community students prize money program koppal
ಕೊಪ್ಪಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಾಲುಮತ ಸಮುದಾಯ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು. ಸಂಸದ ರಾಜಶೇಖರ ಹಿಟ್ನಾಳ,ಆರ್​ಡಿಪಿಆರ್​ ವಿಶೇಷ ಕಾರ್ಯದರ್ಶಿ ಚಂದ್ರಶೇಖರ, ಶಿವಸಿದ್ಧೇಶ್ವರ ಸ್ವಾಮೀಜಿ, ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ ಇದ್ದರು.
Published on

ಕೊಪ್ಪಳ: ಹಾಲುಮತ ಸಮುದಾಯ ಶೈಕ್ಷಣಿ, ರಾಜಕೀಯ, ಆರ್ಥಿಕವಾಗಿ ಅಭಿವೃದ್ಧಿ ಆಗಬೇಕಿದೆ. ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರ. ಎಲ್ಲರೂ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಹಾಲುಮತ ಮಹಾಸಭಾದಿಂದ ಭಾನುವಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣವಂತರಾದಾಗ ಸಾಧನೆ ಸಾಧ್ಯ. ಕಾಳಿದಾಸ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಹಿರಿಯರು ಶ್ರಮವಹಿಸಿ ಸಂಸ್ಥೆ ಕಟ್ಟಿದ್ದಾರೆ. ಕಟ್ಟಡ ಕಾಮಗಾರಿಗೆ 2 ಕೋಟಿ ರೂ. ನೀಡುವೆ. ಶ್ರೀ 1 ಕೋಟಿ ರೂ. ಬಿಡುಡಗೆ ಆಗಲಿದೆ. ಪಿಯು, ಪದವಿ ಕಾಲೇಜು ಆಗಬೇಕು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಕನಕದಾಸ ಪುತ್ಥಳಿ ಅನಾವರಣ ಶ್ರೀ ಮಾಡಲಾಗುವುದು. ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, 10 ಕೋಟಿ ರೂ. ಅನುದಾನದಲ್ಲಿ ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಸಮುದಾಯ ಜನರು ನಿಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ. ಇದರಿಂದ ಸಂಟಿತರಾಗಲು ಸಾಧ್ಯ. ಶಿಕ್ಷಣ, ಸಂಟನೆ ಮೂಲಕ ಸಮುದಾಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.

ಆರ್​ಡಿಪಿಆರ್​ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ, ತರಬೇತಿ, ಮಾರ್ಗದರ್ಶನ ಪಡೆದು ಸಾಧನೆ ಮಾಡಿ. ಅಂಕ ಗಳಿಸುವಂತೆ ಮಕ್ಕಳಿಗೆ ಪಾಲಕರು ಒತ್ತಡ ಹಾಕಬೇಡಿ. ಇದರಿಂದ ಮಕ್ಕಳ ಮೇಲೆ ಪರಿಣಾಮವಾಗಲಿದೆ. ಕಲಿಕೆ ಗುಣಮಟ್ಟ ಹೆಚ್ಚಿಸಿ. ಸಾಧನೆಗೆ ಅನೇಕ ಮಾರ್ಗಗಳಿವೆ ಎಂದು ಸಲಹೆ ನೀಡಿದರು.

ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ ಮಾತನಾಡಿ, ಕೊಪ್ಪಳ ರಾಜಕೀಯವಾಗಿ ಕುರುಬ ಸಮುದಾಯಕ್ಕೆ ನಾಯಕತ್ವ ಕೊಟ್ಟಿದೆ. ಕುಷ್ಟಗಿಯಲ್ಲಿ ಗಂಗಣ್ಣ, ಹನುಮಗೌಡ ಶಾಸಕರಾದರು. ಇದು ರಾಜಕೀಯ ತವರು ಮನೆ. ಸಮುದಾಯ ಅಭಿವರದ್ಧಿ ಹಾದಿ ಹಿಡಿದಿದೆ. ಅವಕಾಶ ವಂಚಿತ ಸಮುದಾಯಗಳನ್ನು ಜತೆಗೆ ತೆಗೆದುಕೊಂಡು ಹೋಗಬೇಕು. ಎಲ್ಲ ಸಮುದಾಯಗಳಿಗೆ ಅವಕಾಶ ಸಿಗಬೇಕು. ಮಹಿಳಾ ಸಬಲೀಕರಣ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ಗಣ್ಯರನ್ನು ಸನ್ಮಾನಿಸಲಾಯಿತು. ಹಾಲವರ್ತಿ ಕನಕ ಗುರುಪೀಠ ಶಾಖಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಬೆಂಗಳೂರು ಯೋಜನಾ ನಿರ್ದೇಶಕಿ ಶಾಲಿನಿ, ಇನ್​ ಸೈಟ್ಸ್​ ಐಎಎಸ್​ ಸ್ವಾಭಿಮಾನಿ ಬಳಗದ ಸಂಸ್ಥಾಪಕ ಬಿ.ಜಿ.ವಿನಯಕುಮಾರ, ಪ್ರಮುಖ ಸಿದ್ದಪ್ಪ ನೀರಲೂಟಿ, ಮಹಾಸಭಾ ಜಿಲ್ಲಾಧ್ಯಕ್ಷ ಹನುಂತಪ್ಪ ಕೌದಿ, ಉಪಾಧ್ಯಕ್ಷ ಕುಬೇರ ಮಜ್ಜಿಗಿ, ತಾಲೂಕು ಅಧ್ಯಕ್ಷ ಮುದ್ದಪ್ಪ ಗೊಂದಿ ಹೊಸಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net