ಸಿದ್ದರಾಮಯ್ಯಗೆ ನೋಟಿಸ್ ಗೆ ಖಂಡನೆ, ಆತ್ಮಹತ್ಯೆಗೆ ಯತ್ನ

oppo_2
oppo_2
Published on

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೊಟೀಸ್ ನೀಡುವ ಮೂಲಕ ರಾಜ್ಯಪಾಲರು ಕಾನೂನು ವಿರೋಧಿ ನಡೆಯನ್ನು ತೋರಿ, ದ್ವೇಷದ ರಾಜಕಾರಣವನ್ನು ಮಾಡಿದ್ದಾರೆ ಎಂಬುದು ಖಂಡಿಸಿ ನಗರದಲ್ಲಿ ಕುರುಬ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನೂರಾರು ಜನರು ಪಾದಯಾತ್ರೆ ಮೂಲಕ ಆಗಮಿಸಿ, ರಸ್ತೆ ತಡೆ ನಡೆಸಿ ರಾಜ್ಯಪಾಲರು, ಬಿಜೆಪಿ, ಜೆಡಿಎಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಪಾಲರು ದ್ವೇಷದ ರಾಜಕಾರಣ ಮಾಡಿ, ಹಿಂದುಳಿದ ನಾಯಕನನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು‌

ಷಣ್ಮುಖ ಸಿರಸಗಿ ಎಂಬ ಯುವಕ ಮೈಮೇಲೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್, ಗುರುನಾಥ ಪೂಜಾರಿ, ಲಚ್ಚಪ್ಪ ಜಮಾದಾರ, ಸುನಿಲ್ ಮಾನ್ಪಡೆ, ಹುಲಿಗೆಪ್ಪ ಕನಕಗಿರಿ, ರವಿ ಕಟಗೊಂಡ, ಸಾಯಿಬಣ್ಣ ಪೂಜಾರಿ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net