ಕಲಬುರಗಿಯಲ್ಲಿ ಜಾತಿ ನಿಂದನೆ ಕೇಸ್ ಗೆ ಹೆದರಿ ಕುರುಬ ಯುವಕನ ಆತ್ಮಹತ್ಯೆ

IMG-20240502-WA0034
Published on

ಕಲಬುರಗಿ: ಜಾತಿನಿಂದನೆ ಕೇಸ್ ದಾಖಲಿಸಿದಕ್ಕೆ ಹೆದರಿ ಕುರುಬ ಸಮಾಜದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ನಡೆದಿದೆ.

ನಿಖಿಲ್ ಪೂಜಾರಿ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಲಾಡಮುಗಳಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ.

ನಾಲ್ಕು ದಿನದ ಹಿಂದೆ ಲಾಡಮುಗುಳಿ ಗ್ರಾಮದಲ್ಲಿ ಜಾತ್ರೆ ವೇಳೆ ಗಲಾಟೆ ನಡೆದಿತ್ತು. ಎರಡು ಸಮುದಾಯದ ಯುವಕರ ನಡುವೆ ಕ್ಷುಲ್ಲಕ‌ ವಿಚಾರಕ್ಕೆ ಗಲಾಟೆಯಾಗಿದೆ.

ಗಲಾಟೆಯ ಬಳಿಕ ಊರವರ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ನಡೆದಿತ್ತು. ಬಳಿಕ ನಿಖಿಲ್ ಪೂಜಾರಿ ಸೇರಿ ಹಲವರ ವಿರುದ್ದ ದೂರು ನೀಡಿದ್ದ ಇನ್ನೊಂದು ಸಮುದಾಯ ಯುವಕರು.

ನರೋಣಾ ಪೊಲೀಸ್ ಠಾಣೆಯಲ್ಲಿ ನಿಖಿಲ್ ಸೇರಿ ಹಲವರ ವಿರುದ್ದ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಇದರಿಂದ ಹೆದರಿ ನೇಣಿಗೆ ಶರಣಾದ ನಿಖಿಲ್ ಪೂಜಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net