ಕುರೇಕುಪ್ಪ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತ

Sandur kurekupp Election
ಕುರೇಕುಪ್ಪ ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಕಲ್ಗುಡೆಪ್ಪ, ಜ್ಯೋತಿ ಅವರನ್ನು ಸನ್ಮಾನಿಸಲಾಯಿತು. ಸಂಸದ ಈ.ತುಕಾರಾಮ್, ಪ್ರಮುಖರಾದ ಎಸ್.ಸಿರಾಜ್, ಜಿ.ಏಕಾಂಬ್ರಪ್ಪ, ಕೆ.ನೂರ್ ಮಹ್ಮದ್ ಇತರರಿದ್ದರು.
Published on

ಸಂಡೂರು: ಕುರೇಕುಪ್ಪ ಪುರಸಭೆ ಕಾಂಗ್ರೆಸ್ ವಶವಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷರಾಗಿ 5ನೇ ವಾರ್ಡ್‌ನ ಕೆ.ಕಲ್ಗುಡೆಪ್ಪ ಹಾಗೂ 23ನೇ ವಾರ್ಡ್‌ನ ಜ್ಯೋತಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕಲ್ಗುಡೆಪ್ಪ, ಜೆಡಿಎಸ್‌ನ ಲಕ್ಷ್ಮೀ ಕೆ.ಹೊಸಗೇರಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ, ಬಿಜೆಪಿಯಿಂದ ಪ್ರೇಮಾ ಸ್ಪರ್ಧಿಸಿದ್ದರು. 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 9 ಸ್ಥಾನ ಪಡೆದಿವೆ. ಬಳ್ಳಾರಿ ಕಾಂಗ್ರೆಸ್ ಸಂಸದ ವೋಟ್ ಮಾಡಿದ್ದರಿಂದ 10 ಮತಗಳು ಬಿದ್ದು ಕೈ ಪಕ್ಷ ಗೆಲುವು ಸಾಧಿಸಿತು.

ಜಿಂದಾಲ್‌ನ ಐದು ಸದಸ್ಯರು ತಟಸ್ಥರಾಗಿದ್ದರಿಂದ ನಿರಾಸಯವಾಗಿ ಜಯ ಸಿಕ್ಕಿತು.
ಸಂಸದ ಈ.ತುಕಾರಾಮ್ ಮಾತನಾಡಿ, ಕುರೇಕುಪ್ಪ ಪಟ್ಟಣದಲ್ಲಿ ರಸ್ತೆ, ಚರಂಡಿ, ಕುಡಿವ ನೀರು, ಬೀದಿ ದೀಪ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ನೂತನ ಅಧ್ಯಕ್ಷರಿಗೆ ತಿಳಿಸಿದರು.

ತಹಸೀಲ್ದಾರ್ ಅನಿಲ್ ಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮುಖ್ಯಾಧಿಕಾರಿ ಸತೀಶ್ ಗುಡ್ಡೆ, ಜಿಸಿಬಿ ಚಿನ್ನಬಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬ್ರಪ್ಪ, ಉಪಾಧ್ಯಕ್ಷ ಕೆ.ನೂರ್ ಮಹ್ಮದ್, ಜಿಪಂ ಮಾಜಿ ಸದಸ್ಯರಾದ ಜನಾರ್ದನ, ಟಿ.ಲಕ್ಷ್ಮಣ, ತಾಪಂ ಮಾಜಿ ಅಧ್ಯಕ್ಷ ಗಂಟೆ ಕುಮಾರಸ್ವಾಮಿ, ಗಡಾದ್ ರಮೇಶ್, ರಾಮಾಂಜನೇಯ, ಜಿ.ಎಸ್.ಸೋಮಪ್ಪ, ಎಸ್.ಕೆ.ಮೆಹಬೂಬ್ ಬಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net