

ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಗಸ್ಱ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಏಕಸ್ ಫೌಂಡೇಷನ್ ಸಹಯೋಗದೊಂದಿಗೆ ಆಯೋಜಿಸಿದ್ದ ಆವಿಷ್ಕಾರ -ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕಿನ ಕುರಡಿಕೇರಿ ಸರ್ಕಾರಿ ಪ್ರೌಢಶಾಲೆ ಅತ್ಯುತ್ತಮ ವಿಜ್ಞಾನ ಮಾದರಿ ಪ್ರಶಸ್ತಿ ಪಡೆದಿದೆ.
ವಿದ್ಯಾರ್ಥಿಗಳಾದ ಅನೀತಾ ಉಣಕಲ್ಲ ಹಾಗೂ ಮಾಸುದ್ದಿನ ಅಣ್ಣಿಗೇರಿ ಸ್ಮಾರ್ಟ್ ರಸಗೊಬ್ಬರ ಯಂತ್ರ ಮಾದರಿಯನ್ನು ಪ್ರದರ್ಶಿಸಿದ್ದರು. ಅತ್ಯುತ್ತಮ ಮಾದರಿ ಪ್ರಶಸ್ತಿಯೊಂದಿಗೆ ಪ್ರತಿ ವಿದ್ಯಾರ್ಥಿ ತಲಾ 6000 ರೂ. ಮೌಲ್ಯದ ವಿಜ್ಞಾನ ಆವಿಷ್ಕಾರ ಕಿಟ್ ಪಡೆದಿದ್ದಾರೆ. ವಿಜ್ಞಾನ ಶಿಕ್ಷಕಿ ರಾಜಶ್ರೀ ಬೀಡಿ ಮಾರ್ಗದರ್ಶನ ಮಾಡಿದ್ದರು.