

ನಂಜನಗೂಡು: ನಗರದ ಟೌನ್ ಟೆನ್ನಿಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಕುರಹಟ್ಟಿ ಕೆ.ಜಿ. ಮಹೇಶ್, ಉಪಾಧ್ಯಕ್ಷರಾಗಿ ಎನ್. ನಾಗೇಂದ್ರ, ಕಾರ್ಯದರ್ಶಿಯಾಗಿ ಮಧುಸೂದನ್ ಆಯ್ಕೆಯಾದರು.
ಭಾನುವಾರ ಟೌನ್ ಟೆನಿಸ್ ಕ್ಲಬ್ ಆವರಣದಲ್ಲಿ ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕುರಹಟ್ಟಿ ಕೆ.ಜಿ.ಮಹೇಶ್, ಎನ್.ಎಂ.ಮಂಜುನಾಥ್ ಸ್ಪರ್ಧಿಸಿದ್ದರು. ಕೆ.ಜಿ.ಮಹೇಶ್ 102 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಎನ್.ಎಂ.ಮಂಜುನಾಥ್ 75 ಮತ ಪಡೆದು ಪರಾಭವಗೊಂಡರು. ಕಾರ್ಯದರ್ಶಿಯಾಗಿ ಮಧುಸೂದನ್108 ಮತ ಪಡೆದು ಆಯ್ಕೆಯಾದರೆ, ವಿಷಕಂಠ 67 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷರಾಗಿ ಎನ್.ನಾಗೇಂದ್ರ 117 ಮತ ಪಡೆದು ಆಯ್ಕೆಯಾದರೆ, ನಂಜುಂಡಸ್ವಾಮಿ ಬೊಮ್ಮಾಯಿ 59 ಮತ ಪಡೆದು ಪರಾಭವಗೊಂಡರು. ನಿರ್ದೇಶಕರಾಗಿ ಚಂದ್ರಶೇಖರ್-122, ಎನ್.ಟಿ.ಗಿರೀಶ-120, ಎಚ್.ಕೆ.ಜಗದೀಶ-113, ಎಲ್.ಬಾಬು-107, ನಂಜುಂಡಸ್ವಾಮಿಅಂಬಿ-105, ಅರುಣ್-89, ಶ್ರೀನಿವಾಸ ರೆಡ್ಡಿ 85 ಮತ ಪಡೆದು ಆಯ್ಕೆಯಾದರು. ಕ್ರೀಡಾ ಕಾರ್ಯದರ್ಶಿಯಾಗಿ ಎಂ.ವಿಜಯ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಕುರಹಟ್ಟಿ ಕೆ.ಜಿ.ಮಹೇಶ್ ಮಾತನಾಡಿ, ನಂಜನಗೂಡು ರಾಷ್ಟ್ರೀ ಯ ಮಟ್ಟದಲ್ಲಿ ಕ್ರೀಡಾ ಇತಿಹಾಸ ಹೊಂದಿದ್ದು, ಟೌನ್ ಟೆನಿಸ್ ಕ್ಲಬ್‌ಗೆ ನೂರು ವರ್ಷಗಳ ಇತಿಹಾಸವಿದೆ, ನಂಜನಗೂಡಿನ ಕ್ರೀಡಾ ಇತಿಹಾಸ ಮರುಕಳಿಸುವಂತೆ ಮಾಡಲು ಕ್ರೀಡಾಶಕ್ತರನ್ನು ಪ್ರೋತ್ಸಾಹಿಸಿ ಕ್ರೀಡಾಪಟುಗಳನ್ನು ರೂಪಿಸಲಾಗುವುದು. ನಂಜನಗೂಡಿನಲ್ಲಿ ಈಜುಕೊಳ ಸೌಲಭ್ಯವಿಲ್ಲದೆ ಕ್ರೀಡಾ ಪ್ರೇಮಿಗಳಿಗೆ ಬೇಸರವಿದೆ. ಶೀಘ್ರದಲ್ಲೇ ಈಜುಕೊಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ನಿಕಟ ಪೂರ್ವ ಅಧ್ಯಕ್ಷ ನಾಗರಾಜು, ಮುಖಂಡರಾದ ಶಾಮ್ ಪಟೇಲ್, ವಿನಯ್ ಕುಮಾರ್, ಉಮೇಶ್, ಇತರ ಪ್ರಮುಖರು ಇದ್ದರು.