

ಕೂಡ್ಲಿಗಿ: ತಾಲೂಕಿನ ಕುಪ್ಪಿನಕೆರೆ ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೂತ್ತು ಭಕ್ತರು ರಥದ ಸುತ್ತ ಮೂರು ಸುತ್ತು ಹಾಕಿ ರಥದಲ್ಲಿ ಪ್ರತಿಷ್ಠಾಪನೆ ಮಾಡಿದರು. ಇದಕ್ಕೂ ಮೊದಲು ಮಹಿಳೆಯೊಬ್ಬರು ಸ್ವಾಮಿಗೆ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಹರಾಜು ಹಾಕಿದ ಸ್ವಾಮಿಯ ಪಟವನ್ನು ಕುಪ್ಪಿನಕೆರೆ ಗ್ರಾಮದ ಜಿ. ಸಿದ್ದೇಶ 1,41,101 ರೂ.ಗೆ ಪಡೆದರು. ನಂತರ ಭಕ್ತರು ಬಾಳೆ ಹಣ್ಣು ಎಸೆದು ರಥವನ್ನು ಪಾದಗಟ್ಟೆಯವರಗೆ ಎಳೆದುಕೊಂಡು ಹೋಗಿ ಮರಳಿ ದೇವಸ್ಥಾನದ ಬಳಿ ತಂದು ನಿಲ್ಲಿಸಿದರು. ಇದಕ್ಕೂ ಮೊದಲು ಅನೇಕ ಭಕ್ತರು ರಥದ ಗಾಲಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪದ ಅಭಿಷೇಕ ಮಾಡಿ ಭಕ್ತಿ ಸಮರ್ಪಿಸಿದರು.