ಕುಪ್ಪಿಭೀಮ ದೇವಸ್ಧಾನದಲ್ಲಿ ವಿಶೇಷ ಪೂಜೆ

lng Kuppibheema Temple
ಕಸಬಾ ಲಿಂಗಸುಗೂರಿನಲ್ಲಿ ಕುಪ್ಪಿಭೀಮರಾಯ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಜರುಗಿತು.
Published on

ಲಿಂಗಸುಗೂರು: ಬೆನಕನ ಅಮಾವಾಸ್ಯೆ ನಿಮಿತ್ತ ಪುರಸಭೆ ವ್ಯಾಪ್ತಿಯ ಕಸಬಾ ಲಿಂಗಸುಗೂರು ಗ್ರಾಮದ ಆರಾಧ್ಯ ದೈವ ಕುಪ್ಪಿಭೀಮ ದೇವಸ್ಧಾನದ ಶ್ರೀರಾಮ ತೀರ್ಥದಲ್ಲಿ ದೇವರ ಉತ್ಸವ ಮೂರ್ತಿಗೆ ಶನಿವಾರ ವಿಶೇಷ ಅಭಿಷೇಕ ನೆರವೇರಿಸಲಾಯಿತು.

ನಂತರ ಕುಪ್ಪಿಭೀಮ ದೇವರಿಗೆ ಹೂವು ಹಾಗೂ ತುಳಸಿ ಹಾರದೊಂದಿಗೆ ಅಲಂಕಾರ ಮಾಡಲಾಯಿತು. ದೇವಸ್ಥಾನ ದರ್ಶನಕ್ಕೆ ಬಂದ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಭಜನೆ ಮಂಗಲಗೊಳಿಸಲಾಯಿತು.

ಅರ್ಚಕರಾದ ಕುಪ್ಪಣ್ಣ, ವಿರೂಪಾಕ್ಷಿ, ಗೋವಿಂದಪ್ಪ, ಸೀನಪ್ಪ, ವೆಂಕೋಬ, ಮೌನೇಶ, ಚಂದ್ರು, ಪ್ರಮುಖರಾದ ವಿಜಯೇಂದ್ರ ದಾಸ, ರಾಮಯ್ಯ ಗುತ್ತೇದಾರ, ಅಮರೇಶ ಹೊರಪೇಟಿ, ಭೀಮಣ್ಣ ಹೀರೆಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net