

ಬಂಟ್ವಾಳ: ಕುಪ್ಪೆಟ್ಟು ಬರ್ಕೆಯ ಶ್ರೀ ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನದಲ್ಲಿ ದೈವಸ್ಥಾನ ಪ್ರತಿಷ್ಠಾಪನಾ ಮಹೋತ್ಸವ ಫೆ. 18ರಿಂದ 22ರವರೆಗೆ ನಡೆಯಲಿದ್ದು ಊರ-ಪರವೂರ ಭಕ್ತರಿಂದ ಸಂಗ್ರಹಣೆಗೊಂಡ ಹಸಿರು ಹೊರೆಕಾಣಿಕೆಯನ್ನು 16ರಂದು ಸಂಜೆ 3 ಗಂಟೆಗೆ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ವಠಾರದಿಂದ ತರುವ ಬಗ್ಗೆ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಆಡಳಿತ ಮಂಡಳಿಯವರಲ್ಲಿ ವಿನಂತಿ ಮಾಡಲಾಯಿತು.
ಕುಪ್ಪೆಟ್ಟು ಪಂಜುರ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಹರೀಶ್ ಸನಿಲ್ ಕುಪ್ಪೆಟ್ಟು, ಕೋಶಾಧಿಕಾರಿ ಜಯ ಪೂಜಾರಿ ಕುಪ್ಪೆಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು, ಪ್ರಧಾನ ಕಾರ್ಯದರ್ಶಿ ನವೀನ್ ಪೂಜಾರಿ ಹೊಸಹೊಕ್ಲು, ಉಪಾಧ್ಯಕ್ಷ ವಾಮನ ಬುನ್ನಾನ್ ಕುಂಟಾಲಗುಡ್ಡೆ, ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಸತೀಶ್ ಪೂಜಾರಿ ಹಲಕ್ಕೆ, ಪ್ರಧಾನ ಕಾರ್ಯದರ್ಶಿ ರತ್ನಾಕರ್ ಪೂಜಾರಿ ಮದಂಗೋಡಿ, ಸದಸ್ಯರಾದ ಮಹಾಬಲ ಪೂಜಾರಿ, ಅನುಷ್ ಅಡಂಗಾಜೆ, ವೀರಭದ್ರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ದಿನೇಶ್ ಸುವರ್ಣ ರಾಯಿ, ಕುಪ್ಪೆಟ್ಟು ಪಂಜುರ್ಲಿ ದೈವದ ಇತಿಹಾಸದ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.