ಡಿ.9,10ರಂದು ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ

kupma
Published on




ಮಂಗಳೂರು : ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ (ಕುಪ್ಮ) ಇದರ ವತಿಯಿಂದ ಡಿ. 9 ಮತ್ತು 10ರಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ-ಮುಕ್ತ ಸಮಾವೇಶ 2023 ನಡೆಯಲಿದೆ.
ಡಿ.9ರಂದು ಬೆಳಿಗ್ಗೆ 11.30ರಿಂದ 12.30ರ ವರೆಗೆ ನೋಂದಣಿ, ಮಧ್ಯಾಹ್ನ 12.30 ರಿಂದ 2ರವರೆಗೆ ನೆಟ್‌ವರ್ಕಿಂಗ್, ಮಧ್ಯಾಹ್ನ 2ರಿಂದ 4ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಾಯಂಕಾಲ 4ರಿಂದ ಕುಪ್ಮಾದ ಗುರಿ ಮತ್ತು ಉದ್ದೇಶಗಳು ವಿಚಾರದಲ್ಲಿ ವಿಷಯ ಮಂಡನೆ ನಡೆಯಲಿದೆ.
ಡಿ.10ರಂದು ಬೆಳಗ್ಗೆ 0.30ರಿಂದ ಖಾಸಗಿ ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಯ ಸವಾಲುಗಳು ಮತ್ತು 11ರಿಂದ ರಾಷ್ಟ್ರ ನಿರ್ಮಾಣದಲ್ಲಿ ಖಾಸಗಿ ಪದವಿ ಪೂರ್ವ ಕಾಲೇಜುಗಳ ಪಾತ್ರ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ವಿಷಯಗಳ ಮಂಡನೆ ಮಾಡಲಿದ್ದಾರೆ. ವಿಚಾರ ಮಂಡನೆಯ ಬಳಿಕ ಸಂವಾದ ಮತ್ತು ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net