ಕುಂಟೋಜಿ ಬಸವೇಶ್ವರ ಪಲ್ಲಕ್ಕಿ, ಕಲಶಾರೋಹಣ

Kuntoji, Basaveshwara Palakki, Kalasarohana, Muddebihala,
ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕಲಶ, ಪಲ್ಲಕ್ಕಿ ಮೆರವಣಿಗೆ ನಡೆಯಿತು. ಗುರುಲಿಂಗಪ್ಪ ಸುಲ್ಲಳ್ಳಿ, ಆನಂದ ಗಸ್ತಿಗಾರ, ಮಲ್ಲಿಕಾರ್ಜುನ ನಾಟೇಕಾರ, ಮಂಜುನಾಥ ಅಬ್ಬಿಹಾಳಮಠ ಇತರರಿದ್ದರು.
Published on

ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಬಸವೇಶ್ವರರ ಪಲ್ಲಕ್ಕಿ ಉತ್ಸವ, ಕಲಶಾರೋಹಣ ಅದ್ದೂರಿಯಾಗಿ ಜರುಗಿತು.

ಪಲ್ಲಕ್ಕಿ ಹಾಗೂ ಕಲಶಗಳ ಮೆರವಣಿಗೆಯಲ್ಲಿ ಸ್ಥಳೀಯ ಬಸವೇಶ್ವರ ಪ್ರೌಢಶಾಲೆ ಮಕ್ಕಳ ಲೇಝಿಮು, ಸಿದ್ಧಿವಿನಾಯಕ ಕೋಲಾಟ ತಂಡ, ಹರಿಂದ್ರಾಳ ರಾಮಾರೂಢ ಹಲಗಿ ಮಜಲು ಹಾಗೂ ಸಿದ್ಧರಾಮೇಶ್ವರ ಮಹಿಳಾ ಡೊಳ್ಳಿನ ಸಂಘದಿಂದ ವಿಶೇಷ ಪ್ರದರ್ಶನ ನಡೆಯಿತು.

ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಉಪಾಧ್ಯಕ್ಷ ಆನಂದ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೇಕಾರ, ಖಜಾಂಚಿ ಬಸಲಿಂಗಪ್ಪಗೌಡ ಬಿರಾದಾರ, ಪದಾಧಿಕಾರಿಗಳಾದ ಆನಂದ ಗಸ್ತಿಗಾರ, ರಾಮಣ್ಣ ಹುಲಗಣ್ಣಿ, ಬಸಲಿಂಗಪ್ಪಗೌಡ ಬಿರಾದಾರ, ಸಂಗಯ್ಯ ಮಠ, ವೀರಭದ್ರಪ್ಪ ಪತ್ತಾರ, ನಾಗಪ್ಪ ಸಜ್ಜನ, ವೀರಭದ್ರಪ್ಪ ಊರಾನ, ಬಸವರಾಜ ಮಡಿವಾಳರ, ಹುಚ್ಚೇಸಾಬ ನಾಲತವಾಡ, ಹಣಮಂತ ಕುಂಬಾರ, ಮುತ್ತು ಜಾವೂರ, ಕುಮಾರ ಹಡಪದ, ಹಣಮಂತ ಭಜಂತ್ರಿ, ಲಕ್ಷ್ಮಣ ಮುರಾಳ, ದುರಗಪ್ಪ ಕವಡಿಮಟ್ಟಿ, ಹಣಮಂತ ನಾಯಕ, ಪ್ರಕಾಶ ಹೂಗಾರ, ಮಂಜುನಾಥ ಅಬ್ಬಿಹಾಳಮಠ, ಸಿದ್ದು ಹೆಬ್ಬಾಳ, ಬಸವರಾಜ ಹುಲಗಣ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net