ದೈವಿಕ ಶಕ್ತಿಯ ಆರಾಧನೆಯಿಂದ ಎತ್ತರಕ್ಕೇರಲು ಸಾಧ್ಯ

nemostava
ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಸಭೆಯಲ್ಲಿ ಸದಾಶಿವ ಶೆಟ್ಟಿ ಕನ್ಯಾನ ಮಾತನಾಡಿದರು. ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಚಿದಾನಂದ ಆಳ್ವ ಮಂಜಕೊಟ್ಟಗೆ, ದಾಮೋದರ ದೇಲಂಪಾಡಿ ಮತ್ತಿತರರಿದ್ದರು.
Published on

ಬದಿಯಡ್ಕ: ನಾವು ನಿರೀಕ್ಷೆ ಮಾಡದೆ ಇರುವ ಸ್ಥಳಕ್ಕೂ ನಮ್ಮನ್ನು ಕರೆದೊಯ್ಯುವ ದೇವರ ಲೀಲೆ ಅಪಾರವಾಗಿದೆ. ದೈವಿಕ ಶಕ್ತಿಯ ಆರಾಧನೆಯಿಂದ ನಾವು ಎತ್ತರಕ್ಕೇರಬಹುದು. ಸದಾ ದೇವರನ್ನು ನೆನೆಯುತ್ತಾ ಮುಂದುವರಿದಾಗ ನಮ್ಮ ಕಾರ್ಯಕೈಗೂಡುತ್ತದೆ ಎಂದು ಉದ್ಯಮಿ ಕುಳೂರು ಸದಾಶಿವ ಶೆಟ್ಟಿ ಕನ್ಯಾನ ಅಭಿಪ್ರಾಯಪಟ್ಟರು.

ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದರು.

ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಚಿದಾನಂದ ಆಳ್ವ ಮಂಜಕೊಟ್ಟಗೆ, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ದಾಮೋದರ ದೇಲಂಪಾಡಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ಯಾಮ ಭಟ್ ಕೆ.ಎಂ. ವಂದಿಸಿದರು. ಶ್ಯಾಮಪ್ರಸಾದ ಕುಳಮರ್ವ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net