ಕುನ್ನಾಳ ಪಿಎಂಶ್ರೀ ಸರ್ಕಾರಿ ಶಾಲೆ ಲೋಕಾರ್ಪಣೆ

29RAM1
Published on

ರಾಮದುರ್ಗ: ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮೂಲಕ ಗುಣಾತ್ಮಕ ಶಿಣದೊಂದಿಗೆ ಮೂಲಭೂತ ಸೌಕರ್ಯ ಒದಗಿಸುವ ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿ ಆರಂಭಿಸಿದ ಪಿಎಂಶ್ರೀ ಯೋಜನೆಯಡಿ ಮೊದಲ ಹಂತದಲ್ಲೇ ಆಯ್ಕೆಯಾಗಿರುವ ತಾಲೂಕಿನ ಕುನ್ನಾಳ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರ ಶಿಣ ಸಚಿವ ಧಮೇಂರ್ದ್ರ ಪ್ರಧಾನ ಅವರು ಅಖಿಲ ಭಾರತ ಶಿಾ ಸಮಾಗಮ& 2025 ವರ್ಚುವಲ್​ ಕಾರ್ಯಕ್ರಮದ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು.

ನವದೆಹಲಿಯ ಭಾರತ ಮಡಪಮ್​ ಸಭಾಭವನದಲ್ಲಿ ಮಂಗಳವಾರ ಜರುಗಿದ ವರ್ಚುವಲ್​ ಕಾರ್ಯಕ್ರಮದಲ್ಲಿ ಕುನ್ನಾಳ ಗ್ರಾಮದ ಸಮುದಾಯ, ಎಸ್​ಡಿಎಂಸಿ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.

ಸಚಿವ ಧಮೇರ್ಂದ್ರ ಪ್ರಧಾನ ಮಾತನಾಡಿ, ದೇಶದ ಪ್ರತಿ ವಿದ್ಯಾರ್ಥಿಗೆ ಗುಣಾತ್ಮಕ ಶಿಣ ಸಿಗಬೇಕೆಂಬ ಮಹತ್ವಾಕಾಂಯೊಂದಿಗೆ ಪಿಎಂಶ್ರೀ ಯೋಜನೆ ಆರಂಭಿಸಿದೆ ಎಂದರು.

ಕೇಂದ್ರ ಶಿಣ ಸಚಿವಾಲಯದ ಸಾಮಾಜಿಕ ಜಾಲತಾಣಗಳ ಮೂಲಕ ದೇಶಾದ್ಯಂತ ಆರಂಭಿಸಿದ ನೇರ ಪ್ರಸಾರದ ಈ ಕಾರ್ಯಕ್ರಮವನ್ನು ಶಾಲೆಯ ನಾಲ್ಕು ದೊಡ್ಡ ಪರದೆಗಳ ಮೇಲೆ ಬಿತ್ತರಿಸುವ ವ್ಯವಸ್ಥೆ ಮಾಡಲಾಗಿತ್ತು.

ನವದೆಹಲಿಯಲ್ಲಿ ಜರುಗಿದ ಸಮಾರಂಭದಲ್ಲಿ ಕೇಂದ್ರ ರಾಜ್ಯ ಖಾತೆ ಶಿಣ ಸಚಿವ ಡಾ. ಸುಕಂತಾ ಮಜುಂದಾರ, ಕೇಂದ್ರ ಸ್ವತಂತ್ರ ಖಾತೆ ಶಿಣ ಸಚಿವ ಜಯಂತ ಚೌಧರಿ, ವಿವಿಧ ರಾಜ್ಯಗಳ ಶಿಣಮಂತ್ರಿಗಳು ಇದ್ದರು.

ವರ್ಚುವಲ್​ ಕಾರ್ಯಕ್ರಮದಲ್ಲಿ ವಿ.ಡಿ. ದಳವಾಯಿ, ಪ್ರಕಾಶ ಜೇವೂರ, ಬಿ.ಬಿ. ಹಾಲೊಳ್ಳಿ, ಸತೀಶ ಮಳಲಿ, ಹಣಮಂತ ಗಾಣಿಗೇರ, ರಮೇಶ ಸಕ್ರೆಪ್ಪಗೋಳ, ಈರಣ್ಣ ಸಿದ್ನಾಳ, ಬಸವರಾಜ ಸುಣಧೋಳಿ, ಪ್ರವಿಣ ಹುದ್ದಾರ, ಗುರುಪಾದ ಅಳ್ಳಿಗಿಡದ, ಸಿದ್ದಪ್ಪ ಕಳ್ಳಿ, ರವಿ ಹಲ್ಯಾಳ, ಹಣಮಂತ ಮಡಿವಾಳರ, ಕಾಡಪ್ಪ ಹುದ್ದಾರ, ಸಿದ್ದಪ್ಪ ಕೊಣ್ಣೂರ ಇತರರಿದ್ದರು.

ಸಮಗ್ರ ಅಭಿವದ್ಧಿಯ ನೀಲಿನಕ್ಷೆ

ಪಿಎಂಶ್ರೀ ಯೋಜನೆಯಡಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು, ಯೋಗ ಶಿಣ, ವತ್ತಿ ಮಾರ್ಗದರ್ಶನ ಹಾಗೂ ಸಮಾಲೋಚನೆ, ಕರಾಟೆ, ಶಿಶು ಸ್ನೇಹಿ ಪೀಠೋಪಕರಣ, ಸ್ಮಾರ್ಟ್​ ಕ್ಲಾಸ್​, ಡಿಜಿಟಲ್​ ಲೈಬ್ರರಿ, ವೆಂಡಿಂಗ್​ ಮಷೀನ್​, ಆಟದ ಮೆದಾನದ ಅಭಿವೃದ್ಧಿ, ಕ್ರೀಡಾ ಸಾಮಗ್ರಿಗಳು, ಸಿರಿ ಧಾನ್ಯ, ಸ್ಯಾನಿಟರಿ ಪ್ಯಾಡ್​, ಹಸಿರು ಶಾಲೆ ಉಪಕ್ರಮ, ಬಾಲಾ ಪೀಚರ್​, ೇತ್ರ ಭೇಟಿ, ಅನುಭವಾತ್ಮಕ ಭೇಟಿ, ವಿಜ್ಞಾನ ಹಾಗೂ ಗಣಿತ ವೃತ್ತಗಳು, ವರ್ಗ ಕೊಠಡಿಗಳು, ಸೋಲಾರ್​ ವ್ಯವಸ್ಥೆ ಒಳಗೊಂಡಂತೆ ಒಟ್ಟು 168 ಚಟುವಟಿಕೆಗಳ ಮೂಲಕ ಶಾಲೆಯ ಸಮಗ್ರ ಅಭಿವದ್ಧಿಯ ನೀಲಿನಕ್ಷೆ ರೂಪಿಸಿ ಕಾರ್ಯಗತಗೊಳಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net