ಕುಂಜಾರುಗಿರಿ ದೇವಸ್ಥಾನದಲ್ಲಿ ಮೆಟ್ಟಿಲೋತ್ಸವ

udp-6-mettilu 1
Published on

ಉಡುಪಿ: ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳವಾರ ಜಗನ್ನಾಥ ದಾಸರ ಆರಾಧನೆ ಪ್ರಯುಕ್ತ ಮೆಟ್ಟಿಲೋತ್ಸವ ನಡೆಯಿತು.

ಕುಂಜಾರುಗಿರಿ ದೇವಸ್ಥಾನದ ಪಶ್ಚಿಮ ಭಾಗದ ಮೆಟ್ಟಲಿನಲ್ಲಿ ವಿಶ್ವಪ್ರಿಯತೀರ್ಥ ಸ್ವಾಮೀಜಿ ಪೂಜೆ ಸಲ್ಲಿಸಿದರು.

ಅದಮಾರು ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ, ಜಗನ್ನಾಥ ದಾಸರ ಭಾವಚಿತ್ರಕ್ಕೆ ಮಂಗಳಾರತಿ ಬೆಳಗಿ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಕುಂಜಾರುಗಿರಿ ದೇವಸ್ಥಾನದ ಪಶ್ಚಿಮ ಭಾಗದ ಮೆಟ್ಟಲಿನಲ್ಲಿ ಪೂಜೆ ಸಲ್ಲಿಸಿದ ಬಳಿಕ ಭಜನೆ ಮಾಡುತ್ತಾ ಶ್ರೀಗಳ ಆದಿಯಾಗಿ ನೂರಾರು ಭಕ್ತರು ಮೆಟ್ಟಿಲುಗಳನ್ನೇರಿ ದೇವಸ್ಥಾನದಲ್ಲಿ ಮಂಗಳಭಜನೆಯೊಂದಿಗೆ ಸಂಪನ್ನಗೊಂಡಿತು. ಪಾಜಕ ಕ್ಷೇತ್ರದಿಂದ ಕುಂಜಾರುಗಿರಿ ದೇವಸ್ಥಾನದವರೆಗೆ ನಡೆದ ಮೆರವಣಿಗೆಯಲ್ಲಿ ಸುಮಾರು 18 ಭಜನಾ ಮಂಡಳಿಗಳು ಪಾಲ್ಗೊಂಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net